ಮಂಡ್ಯದಲ್ಲಿ ಮಕ್ಕಳ ಸಾವು ಪ್ರಕರಣ : ತನಿಖೆ ನಡೆಸಿ ಕಾರಣ ಪತ್ತೆ

Mandy Baby Death Case
Highlights

ಮಂಡ್ಯದಲ್ಲಿ ಸಂಭವಿಸಿದ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ ನಟರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದಲೇ ನಮಗೆ ಈ ಎಲ್ಲಾ ವ್ಯಾಕ್ಸಿನೇಷನ್ ಪೂರೈಕೆಯಾಗುತ್ತದೆ.  ಇಲ್ಲಿನ ಘಟನೆ ಬಗ್ಗೆ ಸಮಿತಿ ರಚಿಸಿ ತನಿಖೆ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಂಡ್ಯ : ಮಂಡ್ಯದಲ್ಲಿ ಸಂಭವಿಸಿದ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ ನಟರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದಲೇ ನಮಗೆ ಈ ಎಲ್ಲಾ ವ್ಯಾಕ್ಸಿನೇಷನ್ ಪೂರೈಕೆಯಾಗುತ್ತದೆ.  ಇಲ್ಲಿನ ಘಟನೆ ಬಗ್ಗೆ ಸಮಿತಿ ರಚಿಸಿ ತನಿಖೆ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಕ್ಕಳ ತಜ್ಞರು  ಸೇರಿದಂತೆ ಎಲ್ಲಾ ಕ್ಷೇತ್ರಗಳ ತಜ್ಞರು ಆ ಸಮಿತಿಯಲ್ಲಿದ್ದು, ಆದಷ್ಟು ಬೇಗ ವರದಿ ಪಡೆದು ಮಕ್ಕಳ ಸಾವಿಗೆ ಕಾರಣ ಪತ್ತೆ ಹಚ್ಚಲಾಗುವುದು.  ಯಾರು ಏನೇ ಹೇಳಿದರೂ ಸರ್ಕಾರಿ ನಿಯಮಗಳ ಪ್ರಕಾರವೇ ತನಿಖೆ ನಡೆಸಲಾಗುವುದು. ಉಳಿದ ಮಕ್ಕಳು ಆರೋಗ್ಯವಾಗಿವೆ.  ಎಲ್ಲಾ ಮಕ್ಕಳಿಗೂ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಲಸಿಕೆ ನೀಡಿದವರ ಬಗ್ಗೆಯೂ ಕೂಡ ತನಿಖೆ ನಡೆಯುತ್ತಿದೆ. ಆದರೆ ಈಗಲೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಜಿಲ್ಲೆಯ ವಿವಿಧೆಡೆ  ಲಸಿಕೆ ಹಾಕುವುದು ಮುಂದುವರಿದಿದೆ. ಹೆಚ್ಚಿನ ಕಡೆಗಳಲ್ಲಿ ತೊಂದರೆಯಾದರೆ ಮಾತ್ರವೇ ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ.

loader