ಇಲ್ಲಿನ ಭೆಂಡಿ ಬಜಾರ್‌ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ತುರ್ತು ಸಹಾಯವಾಣಿ ನಂಬರ್ 100ಕ್ಕೆ ಕರೆ ಮಾಡಿ ಸಹಾಯ ಯಾಚಿಸಿ ಬದುಕುಳಿದ ಘಟನೆ ನಡೆದಿದೆ.

ಮುಂಬೈ(ಸೆ.02): ಇಲ್ಲಿನ ಭೆಂಡಿ ಬಜಾರ್‌ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ತುರ್ತು ಸಹಾಯವಾಣಿ ನಂಬರ್ 100ಕ್ಕೆ ಕರೆ ಮಾಡಿ ಸಹಾಯ ಯಾಚಿಸಿ ಬದುಕುಳಿದ ಘಟನೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಅಲಿ ಎಂಬಾತ ಅವಶೇಷ ಅಡಿಯಿಂದಲೇ ತುರ್ತು ಸಂಖ್ಯೆಗೆ ಕರೆ ಮಾಡಿದ್ದ, ಸರಿಯಾದ ಸಮಯಕ್ಕೆ ನೆರವು ದೊರಕಿದ್ದರಿಂದ ಬದುಕಿ ಬಂದಿದ್ದಾನೆ. ದುರಂತಕ್ಕೀಡಾದ ಹುಸೈನಿ ಕಟ್ಟಡದ ಸಮೀಪ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಕಟ್ಟಡದ ಅಡಿಯಲ್ಲಿ ರಾತ್ರಿ ನಿದ್ರಿಸುತ್ತಿದ್ದ. ಕಟ್ಟಡ ಕುಸಿದು ಅವಶೇಷಗಳ ಅಡಿಯಲ್ಲಿ ಅಲ್ಲಾಡಲೂ ಆಗದ ಸ್ಥಿತಿ ಇತ್ತು. ಆದರೆ, ಕೈನಲ್ಲಿದ್ದ ಮೊಬೈಲ್ ಆತನ ಸಹಾಯಕ್ಕೆ ಇದ್ದ ಏಕೈಕ ಸಾಧನವಾಗಿತ್ತು.

ಸಹಾಯವಾಣಿ ಸಂಖ್ಯೆ 100ಕ್ಕೆ ಡಯಲ್ ಮಾಡಿ, ತಾನು ಭೆಂಡಿ ಬಜಾರ್‌'ನಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಸಿಲುಕಿದ್ದಾಗಿ ತಿಳಿಸಿದ್ದ. ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಣೆ ಮಾಡಿದ್ದಾರೆ.