ಸತ್ತಿದ್ದಾನೆಂದು ಭಾವಿಸಿ ವ್ಯಕ್ತಿಯ ಅಂತ್ಯಕ್ರೀಯೆಅಂತ್ಯಕ್ರೀಯೆ ವೇಳೆ ಎದ್ದು ಬಂದ ಈಶ್ವರ್ಸೋಲಾಪುರದ ಸರ್ಕಾರಿ ವೈದ್ಯರ ಯಡವಟ್ಟುಈಶ್ವರ್ ಸತ್ತಿದ್ದಾನೆಂದು ಘೋಷಿಸಿದ್ದ ವೈದ್ಯರುಅಂತ್ಯಕ್ರೀಯೆ ವೇಳೆ ಬದುಕಿರುವ ಸಂಗತಿ ಬಯಲು 

ಕಲಬುರ್ಗಿ(ಜು12): ವ್ಯಕ್ತಿ ಸತ್ತಿದ್ದಾನೆಂದು ಭಾವಿಸಿ ಆತನನ್ನು ಮಣ್ಣು ಮಾಡಲು ಹೋದಾಗ ಆತ ಬದುಕಿರುವ ಸಂಗತಿ ಗೊತ್ತಾಗಿರುವ ಘಟನೆ ಅಫಜಲಪುರ್‌ನಲ್ಲಿ ನಡೆದಿದೆ.

ಇಲ್ಲಿನ ಸ್ಟೇಷನ್ ಗಾಣಗಾಪುರದ ಈಶ್ವರ್ ವಾವಡೆ ಎಂಬ ವ್ಯಕ್ತಿ ಅನಾರೋಗ್ಯದ ಕಾರಣ ಸೋಲಾಪುರದ ಆಸ್ಪತ್ರೆಗೆ ದಾಖಲಾಗಿದ್ದ. ಕೆಲ ದಿನಗಳ ಬಳಿಕ ಈಶ್ವರ್ ಸಾವನ್ನಪ್ಪಿದ್ದಾನೆ ಎಂದು ಸೋಲಾಪುರದ ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಈಶ್ವರ್ ಮೃತದೇಹವನ್ನು ಸ್ವಗ್ರಾಮಕ್ಕೆ ಕರೆತಂದು ಮಣ್ಣು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅಂತ್ಯಕ್ರೀಯೆ ಸಂದರ್ಭದಲ್ಲಿ ಈಶ್ವರ್ ಬದುಕಿರುವ ಸಂಗತಿ ಗೊತ್ತಾಗಿದೆ.

ಕೂಡಲೇ ಈಶ್ವರ್‌ನನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.