ರೈಲಿನ ಮೇಲೇರಿ ಸೆಲ್ಫಿ: ವಿದ್ಯುತ್‌ ತಂತಿ ತಗುಲಿ ದಾರುಣ ಸಾವು

First Published 18, Feb 2018, 8:42 AM IST
Man takes Selfie top Train in Bihar High Tension wire chars him to Death
Highlights

ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಗೂಡ್ಸ್‌ ರೈಲಿನ ಮೇಲಕ್ಕೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ 30,000 ವೋಲ್ಟ್‌ ವಿದ್ಯುತ್‌ ತಂತಿ ತಗುಲಿ ಸುಟ್ಟು ಕರಕಲಾದ ದಾರುಣ ಘಟನೆ ಬಿಹಾರದ ಮುಜಾಫರ್‌ಪುರ್‌ ಜಿಲ್ಲೆಯಲ್ಲಿ ನಡೆದಿದೆ.

ಮುಜಫ್ಫರ್‌ಪುರ: ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಗೂಡ್ಸ್‌ ರೈಲಿನ ಮೇಲಕ್ಕೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ 30,000 ವೋಲ್ಟ್‌ ವಿದ್ಯುತ್‌ ತಂತಿ ತಗುಲಿ ಸುಟ್ಟು ಕರಕಲಾದ ದಾರುಣ ಘಟನೆ ಬಿಹಾರದ ಮುಜಾಫರ್‌ಪುರ್‌ ಜಿಲ್ಲೆಯಲ್ಲಿ ನಡೆದಿದೆ.

ರೋಹನ್‌ಕುಮಾರ್‌(22) ಸೆಲ್ಫಿಗೆ ಬಲಿಯಾದ ಯುವಕ. ರೋಹನ್‌ ಕುಮಾರ್‌ ಬೆಳಗ್ಗೆ 6 ಗಂಟೆಯ ವೇಳೆಗೆ ‘ನಾರಾಯಣಪುರ ಅನಂತ್‌’ ರೈಲ್ವೆ ಸ್ಟೇಷನ್‌ನ ಗೂಡ್ಸ್‌ ರೈಲಿನ ಟಾಪ್‌ ಮೇಲೇರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಆ ವೇಳೆ 30,000 ವೋಲ್ಟ್‌ ಸಾಮರ್ಥ್ಯದ ವಿದ್ಯುತ್‌ ತಂತಿಗೆ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ಆತನ ಜೊತೆಗೆ ಸ್ನೇಹಿತರೂ ಇದ್ದು ಅವರು ಪಾರಾಗಿದ್ದಾರೆ ಎಂದು ಪೊಲೀಸರು ತಿಳಿದಿದ್ದಾರೆ.

loader