ಇದೇ ವರ್ಷದ ಜೂನ್ 19 ರಂದು ಮದ್ದೂರು ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ವಯವಾಗಿತ್ತು

ಮಂಡ್ಯ(ಅ.23): ಮದುವೆ ನಿಶ್ವಯವಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದಿದೆ. ಮಲ್ಲೇಶ್ ಗೌಡ 30 ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಮದುವೆ ನಿಶ್ಚಯವಾಗಿದ್ದ ಯುವತಿ ಹಾಗೂ ಆಕೆಯ ಸ್ನೇಹಿತರು ಕಾರಣ. ಅವರ ಹಿಂಸೆಯಿಂದಾಗಿ ಸಾವಿಗೆ ಶರಣಾಗುತ್ತಿರುವುದಾಗಿ ಆಡಿಯೊ ರೆಕಾರ್ಡ್ ಮಾಡಿ ವಿಷ ಸೇವಿಸಿರುವ ಮಲ್ಲೇಶ್ ಗೌಡ. ಇದೇ ವರ್ಷದ ಜೂನ್ 19 ರಂದು ಮದ್ದೂರು ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ವಯವಾಗಿತ್ತು. ಡಿಸೆಂಬರ್ 4 ರಂದು ಮದುವೆ ನಿಶ್ಚಯವಾಗಿತ್ತು. ರಾತ್ರಿ ಜಮೀನಿನ ಬಳಿ ವಿಷ ಸೇವಿಸಿದ್ದ ಮಲ್ಲೇಶ್ ಗೌಡ. ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವು. ಮಲ್ಲೇಶ್ ಗೌಡನ ತಂದೆ ಬೋರೇಗೌಡರು ಬೆಸಗರ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.