ಈತ ಮಾಡಿದ ಅಪರಾಧಕ್ಕಾಗಿ ಅಲ್ಲಿನ ನ್ಯಾಯಾಲಯದಲ್ಲಿ ಕನಿಷ್ಠ ಶಿಕ್ಷೆಯೇ 100 ವರ್ಷ ಜೈಲು ಶಿಕ್ಷೆಯಂತೆ
ವ್ಯಕ್ತಿಯೊಬ್ಬನಿಗೆ ಆತ ಮಾಡಿದ ಅಪರಾಧಕ್ಕಾಗಿ ನ್ಯಾಯಾಲಯವೊಂದು 100 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ, 35 ವರ್ಷದ ಎಡ್ವರ್ಡ್ ಲೇವಿ ಕೀಯಸ್ ಎಂಬಾತ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ 100 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮೆರಿಕಾದ ಯಲ್ಲೋ ಕಂಟ್ರಿ ಜಿಲ್ಲೆಯ ನ್ಯಾಯಾಧೀಶ ಮೈಖೇಲ್ ಮೋಸೆಸ್ ಈ ಶಿಕ್ಷೆ ವಿಧಿಸಿದ್ದು, ಎಡ್ವರ್ಡ್ ಲೇವಿ ಕೀಯಸ್ ಮಾಡಿದ ಅಪರಾಧಕ್ಕಾಗಿ ಅಲ್ಲಿನ ನ್ಯಾಯಾಲಯದಲ್ಲಿ ಕನಿಷ್ಠ ಶಿಕ್ಷೆಯೇ 100 ವರ್ಷ ಜೈಲು ಶಿಕ್ಷೆಯಂತೆ.
ಕೀಯಸ್ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸ್ತನಗಳು ಹಾಗೂ ಜನನಾಂಗಳನ್ನು ಸ್ಪರ್ಷಿಸಿ ಲೈಂಗಿಕವಾಗಿ ಹಿಂಸಿಸಿದ ಆಪಾದನೆ ಈತನ ಮೇಲಿದೆ. ಆರೋಪಿಯ ತಾಯಿ ಹೆಣ್ಣು ಮಕ್ಕಳ ಆರೋಪವನ್ನು ತಿರಸ್ಕರಿಸಿದ್ದಾರೆ.
