ಸುಮ್ಮನಿದ್ದ ಲಂಡನ್‌ನಲ್ಲಿ ಭುಪನೋರ್ವ ಮಾಡಿದ ಕಿತಾಪತಿ| ಲಂಡನ್‌ನ ಪ್ರಸಿದ್ಧ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ ಆಸಾಮಿ| 1017 ಅಡಿ ಎತ್ತರದ ಗಾಜಿನಿಂದ ನಿರ್ಮಿತ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ| ಪಶ್ಚಿಮ ಯೂರೋಪ್‌ನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ| ಪೊಲೀಸರಿಂದ ವ್ಯಕ್ತಿಯ ಮನವೋಲಿಕೆಗೆ ಶತಪ್ರಯತ್ನ|
ಲಂಡನ್(ಜು.08): ಅನಾಮಧೇಯ ವ್ಯಕ್ತಿಯೋರ್ವ ಲಂಡನ್‌ನ ಪ್ರಸಿದ್ಧ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ ಏರುವ ಪ್ರಯತ್ನ ನಡೆಸಿದ ಘಟನೆ ನಡೆದಿದೆ.
ಒಟ್ಟು 1017 ಅಡಿ ಎತ್ತರದ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ ಪಶ್ಚಿಮ ಯೂರೋಪ್‌ನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಪೂರ್ಣ ಗಾಜಿನಿಂದ ಮಾಡಿರುವ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡವನ್ನು ಅನಾಮಧೇಯ ವ್ಯಕ್ತಿ ಏರಲು ಪ್ರಯತ್ನಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಆತನ ಮನವೋಲಿಸಲು ಪ್ರಯತ್ನಿಸಿದ್ದಾರೆ.
ಆದರೆ ಬಂಧಿಸದಿದ್ದರೆ ಮಾತ್ರ ತಾನು ಕಟ್ಟಡದಿಂದ ಕೆಳಗಳಿದು ಬರುವುದಾಗಿ ವ್ಯಕ್ತಿ ಪಟ್ಟು ಹಿಡಿದಿದ್ದು, ಈತ ಹೇಗೆ ಕಟ್ಟಡದ ಮುಂಭಾಗ ಏರಿದ ಎಂಬುದೇ ಎಲ್ಲರ ಕುತೂಹಲ ಮೂಡಿಸಿದೆ.
