ಹಾವು ಕಚ್ಚಿದರೆ ಕೆಲವರು ಹಾವಿನ ಸಮೇತ ಆಸ್ಪತ್ರೆಗೆ ಬಂದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಚೀನಾದಲ್ಲಿ ವ್ಯಕ್ತಿಯೊಬ್ಬ ತಲೆಯಲ್ಲಿ ಹೊಕ್ಕಿದ್ದರೂ ಪೊಲೀಸ್ ಠಾಣೆಗೆ ಬೈಕ್ ಓಡಿಸಿದ್ದಾನೆ. ಗುವಾಂಗ್ಝೌ ಎಂಬಲ್ಲಿ ಮೊಟಾರ್ ಟ್ಯಾಕ್ಸಿ ಓಡಿಸಿಸುತ್ತಿದ್ದ ಕಿನ್ ಎಂಬಾತನಿಗೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದಿದ್ದ.

ತಲೆಯ 8 ಇಂಚು ಆಳಕ್ಕೆ ಚಾಕು ಹೊಕ್ಕಿದ್ದರೂ ಯಾರೂ ಆತನ ರಕ್ಷಣೆಗೆ ಬರಲಿಲ್ಲ. ಹೀಗಾಗಿ ಆತ ಪೊಲೀಸ್ ಠಾಣೆಗೆ ಬೈಕ್‌ನಲ್ಲೇ ತೆರಳಿದ್ದಾನೆ. ಬಳಿಕ ಆತನಿಗೆ ವೈದ್ಯರು ಚಿಕಿತ್ಸೆ ನಡೆಸಿ ಚಾಕುವನ್ನು ಹೊರತೆಗೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.