ಮತ್ಯಾರಿಗೂ ಆಕೆ ಸಿಗಬಾರದೆಂದು ಪ್ರಿಯತಮೆ ಕೊಂದ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Sep 2018, 10:08 AM IST
Man Released From Jail After 15 years
Highlights

 20 ನೇ ವಯಸ್ಸಿನಲ್ಲೇ ಪ್ರಿಯತಮೆಯನ್ನು ಕೊಂದು ಜೀವಾವಧಿ ಶಿಕ್ಷೆಗೊಳ ಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 15 ವರ್ಷ ಕಳೆದು ಭಾನುವಾರ ಸನ್ನಡತೆ ಆಧಾರದ ಮೇಲೆ ವಸಂತ್‌ಕುಮಾರ್ ಬಿಡುಗಡೆಯಾಗಿದ್ದಾರೆ. ಈ ವೇಳೆ ಅವರು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. 

ಬೆಂಗಳೂರು: ಜೈಲಿನಲ್ಲಿ ಬಹಳಷ್ಟು ಪಾಠ ಕಲಿತಿದ್ದೇನೆ. ಭವಿಷ್ಯದಲ್ಲಿ ಚಲನಚಿತ್ರ ನಿರ್ದೇಶಕನಾಗಬೇಕೆಂಬ ಕನಸು ಕಂಡಿದ್ದೇನೆ..! ಹೀಗೆಂದು ಹೇಳಿದವರು 20 ನೇ ವಯಸ್ಸಿನಲ್ಲೇ ಪ್ರಿಯತಮೆಯನ್ನು ಕೊಂದು ಜೀವಾವಧಿ ಶಿಕ್ಷೆಗೊಳ ಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಗೊಂಡ ವಸಂತ್‌ಕುಮಾರ್ (34) ಮಾತು. 

15 ವರ್ಷಗಳ ಹಿಂದಿನ ಕಥೆ. ನನ್ನೂರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು. ಡಿಪ್ಲೋಮಾ ವ್ಯಾಸಂಗ ಮಾಡುವ ವೇಳೆ ಸಿಕ್ಕವಳೇ ಭಾನು. ನನ್ನಾಕೆಯನ್ನುಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದೆ. ಆಕೆ ಕೂಡ ನನ್ನಷ್ಟೆ ಪ್ರೀತಿಸುತ್ತಿದ್ದಳು. ಹೀಗೆ ನಮ್ಮ ಪ್ರೀತಿಗೆ ಮೂರು ವರ್ಷ ಕಳೆದಿತ್ತು.
ನಮ್ಮಿಬ್ಬರ ಪ್ರೀತಿಯ ವಿಷಯನ್ನು ಮನೆಯಲ್ಲಿ ಹೇಳಿಕೊಂಡೆವು. ಆದರೆ ಭಾನು ಮುಸ್ಲಿಂ ಸಮಾಜಕ್ಕೆ ಸೇರಿದವರಾದ ಕಾರಣ ಆಕೆಯ ಪೋಷಕರು ನಮ್ಮ ಪ್ರೀತಿಗೆ ಒಪ್ಪಿಗೆ ಸೂಚಿಸಲಿಲ್ಲ. 

ಎಷ್ಟು ಮನವಿ ಮಾಡಿ ದರೂ ನಮ್ಮ ಪ್ರೇಮಕ್ಕೆ ಪೋಷಕರು ಗೋಡೆಯಾಗಿದ್ದರು. ಆದರೂ ಯಾವೊದೋ ಒಂದು ನಿರೀಕ್ಷೆಯಲ್ಲಿ ಹೀಗೆ ದಿನ ದೂಡುತ್ತಿದ್ದೆ. ಇದ್ದಕ್ಕಿದ್ದ ಹಾಗೇ ಭಾನುಗೆ ಬೇರೊಬ್ಬ ಹುಡುಗನ ಜತೆ ಮದುವೆ ಮಾಡಿ ಬಿಟ್ಟಿದ್ದರು. ಇದಕ್ಕೆ ಭಾನುವಿನ ಒಪ್ಪಿಗೆ ಕೂಡ ಇತ್ತು. ಇದನ್ನು ಕೇಳಿ ನನಗೆ ಆಕಾಶವೇ ಮೇಲೆ ಬಿದ್ದಂತಾಗಿತ್ತು. ಅವೇಶದಲ್ಲಿದ್ದ ನಾನು ‘ನನ್ನಕೆ ಯಾರಿಗೂ ಸಿಗಬಾರದೆಂದು ನಿರ್ಧರಿಸಿ ಪ್ರಿಯತಮೆಯನ್ನು ಕೊಂದು ಬಿಟ್ಟಿದ್ದೆ. 

ಬಳಿಕ ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದಿದ್ದು, ಇದೀಗ ವಿಧಿಯಾಟ. ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ನನಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಚಿಕ್ಕ ವಯಸ್ಸಿಗೆ ಜೈಲು ಸೇರಿ ಜೀವನದ ಪಾಠ ಕಲಿತಿದ್ದೇನೆ’ ನಿತ್ಯ ಪುಸಕ್ತ ಓದುವ ಮೂಲಕ ಜ್ಞಾನರ್ಜನೆ ಮಾಡಿ ಕೊಂಡಿದ್ದು, ಚಲನಚಿತ್ರ ನಿರ್ದೇಶನಾಗಬೇಕೆಂಬ ಗುರಿ ಹೊಂದಿದ್ದೇನೆ. ಸಿನಿಮಾಗಳಿಗೆ ಕಥೆ ಹಾಗೂ ಸಂಭಾಷಣೆ ಬರೆಯುವುದನ್ನು ಅಭ್ಯಾಸ  ಡಿಕೊಂಡಿದ್ದೇನೆ.

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತೊಡಗಿ  ಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ನಿರ್ಧರಿಸಿ ದ್ದೇನೆ. ತನ್ನಿಷ್ಟದ ಕ್ಷೇತ್ರದಲ್ಲಿ ದುಡಿಯುತ್ತೇನೆ ಎಂದು ತಮ್ಮ ಹೊಸ ಜೀವನದ ಕನಸ್ಸು ಬಿಚ್ಚಿಟ್ಟರು ವಸಂತ್.

loader