ಪ್ರಧಾನ ಮಂತ್ರಿಯವರ ಯೋಜನೆಯಡಿ ಉಳಿತಾಯ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಎಟಿಎಂ ಕಾರ್ಡ್‌ ಮಾಹಿತಿ ಪಡೆದು ಖಾತೆಯಲ್ಲಿದ್ದ 19,999 ರು. ಹಣವನ್ನು ಲಪಟಾಯಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿ: ಪ್ರಧಾನ ಮಂತ್ರಿಯವರ ಯೋಜನೆಯಡಿ ಉಳಿತಾಯ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಎಟಿಎಂ ಕಾರ್ಡ್‌ ಮಾಹಿತಿ ಪಡೆದು ಖಾತೆಯಲ್ಲಿದ್ದ 19,999 ರು. ಹಣವನ್ನು ಲಪಟಾಯಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉರುವಾಲು ಗ್ರಾಮದ ನಿವಾಸಿ, ರಿಕ್ಷಾ ಚಾಲಕ ಗಣೇಶ್‌ ಪೂಜಾರಿ ವಂಚನೆಗೊಳಗಾದವರು. ಶುಕ್ರವಾರ ಗಣೇಶ್‌ ಪೂಜಾರಿ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಕೆನರಾ ಬ್ಯಾಂಕ್‌ನ ಮ್ಯಾನೇಜರ್‌ ಎಂದು ಪರಿಚಯಿಸಿ ಕೊಂಡಿದ್ದು, ಎಟಿಎಂ ಕಾರ್ಡ್‌ ಪಡೆದು ವಂಚನೆ ಎಸಗಿದ್ದಾನೆ.