ಊದಿನ ಕಡ್ಡಿಗೆ ಬಿಎಂಡಬ್ಲ್ಯೂ ಆಹುತಿ: ವಿಡಿಯೋ..!

First Published 14, Jun 2018, 3:09 PM IST
Man Lights Incense Sticks Near New BMW, Burns Luxury Car To A Crisp
Highlights

ಊದಿನ ಕಡ್ಡಿ ಬೆಳಗಿ ಬಿಎಂಡಬ್ಲ್ಯೂ ಕಾರಿಗೆ ಪೂಜೆ

ಬೆಂಕಿ ತಗುಲಿ ಬಿಎಂಡಬ್ಲ್ಯೂ ಕಾರು ಧಗಧಗ

ಚೀನಾದ ಯಾಂಗ್ಜೋವು ನಗರದಲ್ಲಿ ದುರ್ಘಟನೆ

ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರು ಬೆಂಕಿಗೆ ಆಹುತಿ

ಬಿಜಿಂಗ್(ಜೂ.14): ಈ ವ್ಯಕ್ತಿಯ ನಸೀಬು ಕಂಡು ಖುದ್ದು ದೇವರೇ ಅಯ್ಯೋ ವಿಧಿಯೇ..! ಅಂತಾ ಉದ್ಘಾರ ತೆಗೆದರೆ ಅಚ್ಚರಿಪಡಬೇಕಿಲ್ಲ. ಕಾರಣ ವಿಧಿ ಈತನಿಗೆ ಕೊಟ್ಟ ಏಟು ಅಂತಿಂತದ್ದಲ್ಲ. ತನ್ನ ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಊದಿನ ಕಡ್ಡಿ ಹಚ್ಚಿ, ಇಡೀ ಕಾರನ್ನೇ ಬೆಂಕಿಗೆ ಆಹುತಿ ಮಾಡಿದ್ದಾನೆ ಈ ಭೂಪ.

ಚೀನಾದ ಯಾಂಗ್ಜೋವು ನಗರದಲ್ಲಿ ವ್ಯಕ್ತಿಯೊಬ್ಬ ಹೊಸ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದ. ಹೊಸ ಕಾರಿಗೆ ಪೂಜೆ ಮಾಡಿ ಕಾರಿನ ಒಳಗಡೆ ಊದಿನ ಕಡ್ಡಿಯನ್ನು ಹಚ್ಚಿ ದೇವರಿಗೆ ಕೈಮುಗಿದಿದ್ದೇ ತಡ ಕಾರು ಧಗಧಗ ಹೊತ್ತಿ ಉರಿದಿದೆ. ಮನೆಗೆ ತಂದ ಹೊಸ ಕಾರಿಗೆ ಪೂಜೆ ಮಾಡುವ ವೇಳೆ ಕಾರಿನ ಬಳಿ ಕೆಂಪು ಹಾಸು ಹೊದಿಸಲಾಗಿತ್ತು.

ಪೂಜೆ ಮುಗಿದ ಬಳಿಕ ಊದಿನ ಕಡ್ಡಿ ಬೆಳಗಲು ಮುಂದಾದ ಕ್ಷಣದಲ್ಲಿ ಕೆಂಪು ಹಾಸಿಗೆ ಬೆಂಕಿ ತಗುಲಿ ಕೂಡಲೇ ಇಡೀ ಕಾರು ಭಸ್ಮವಾಗಿದೆ. ಹೊಸ ಬಿಎಂಡಬ್ಲ್ಯೂ ಕಾರು ಹೊತ್ತಿ ಉರಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೊಸ ಕಾರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಅಜಾಗರೂಕತೆ ಪ್ರದರ್ಶಿಸಿದ ವ್ಯಕ್ತಿಗೆ ನೆಟಿಜನ್ಸ್ ಚಾಟಿ ಬೀಸಿದ್ದಾರೆ. ಈ ಹೊಸ ಕಾರಿನ ಬೆಲೆ ಸುಮಾರು 50 ಲಕ್ಷ ಎಂದು ಹೇಳಲಾಗಿದೆ.

loader