ಅವಳಿ ಮಕ್ಕಳನ್ನು ಹತ್ಯೆ ಮಾಡಿದ ಸೋದರ ಮಾವ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jun 2018, 1:29 PM IST
Man kills sister’s mentally challenged Twin kids in Hyderabad
Highlights

 ಮಾನಸಿಕ ಅಸ್ವಸ್ಥ ಮಕ್ಳಳನ್ನು ನೋಡಿಕೊಳ್ಳಬೇಕಾದ ಕೆಲಸವನ್ನು ತನ್ನ ತಂಗಿಗೆ ತಪ್ಪಿಸಬೇಕು ಎಂದು ಸ್ವತಃ ಸೋದರ ಮಾವನೆ ಅವಳಿ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಪ್ರಕರಣ ನಡೆದಿದ್ದು ಎಲ್ಲಿ ಮುಂದೆ ಓದಿ

ಹೈದರಾಬಾದ್ ಜೂನ್ 16:  ಮಾನಸಿಕ ಅಸ್ವಸ್ಥ ಮಕ್ಳಳನ್ನು ನೋಡಿಕೊಳ್ಳಬೇಕಾದ ಕೆಲಸವನ್ನು ತನ್ನ ತಂಗಿಗೆ ತಪ್ಪಿಸಬೇಕು ಎಂದು ಸ್ವತಃ ಸೋದರ ಮಾವನೆ ಅವಳಿ ಮಕ್ಕಳನ್ನು ಹತ್ಯೆ ಮಾಡಿದ್ದಾನೆ.

ಹೈದರಾಬಾದ್ ನ ಲ್ಲಿ ಅಮಾನವೀಯ ಪ್ರಕರಣ ನಡೆದಿದ್ದು ಮಲ್ಲಿಕಾರ್ಜುನ್ ರೆಡ್ಡಿ ಎಂಬಾತ ತನ್ನ ತಂಗಿಯ ಮಕ್ಕಳಾದ 12 ವರ್ಷದ ಶ್ರೀಜಣ ರೆಡ್ಡಿ ಮತ್ತು ವಿಷ್ಣುವರ್ಧನ್ ರೆಡ್ಡಿ  ಎಂಬ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿದ ನಂತರ ಮಕ್ಕಳ ದೇಹವನ್ನು ಕಾರ್ ವೊಂದರಲ್ಲಿ ಸಾಗಿಸುವ ಯತ್ನ ಮಾಡುತ್ತಿದ್ದ ದೃಶ್ಯ ಮನೆಯ ಮಾಲೀಕನಿಗೆ ಗೊತ್ತಾಗಿದ್ದು ಆತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳಾದ ಮಲ್ಲಿಕಾರ್ಜುನ್ ಮತ್ತು ಆತನ ಸ್ನೇಹಿತ ವೆಂಕಟರಮಣಿ ರೆಡ್ಡಿ ಹಾಗೂ ಕಾರ್ ಚಾಲಕ ವಿವೇಕ್ ರೆಡ್ಡಿಯನ್ನು ಬಂಧಿಸಿದ್ದಾರೆ. ಈಜು ಕಲಿಸುತ್ತೇನೆ ಎಂದು ತಂದೆ ತಾಯಿ ಬಳಿ ಹೇಳಿದ ಮಲ್ಲಿಕಾರ್ಜುನ್ ಮಾನಸಿಕ ಅಸ್ವಸ್ಥರಾಗಿದ್ದ ಮಾತನಾಡಲು ಬಾರದ ಮಕ್ಕಳನ್ನು ಮಲ್ಲಿಕಾರ್ಜುನ್ ಹೈದರಾಬಾದ್ ಗೆ ಕರೆತಂದಿದ್ದ. ತಂಗಿಗೆ ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದ್ದು ಇದನ್ನು ತಪ್ಪಿಸಲು ಕೃತ್ಯ ಮಾಡಿದೆ ಎಂದು ಮಲ್ಲಿಕಾರ್ಜುನ್ ಪೊಲೀಸ್ ತನಿಖೆ ವೇಳೆ ಹೇಳಿಕೆ ಕೊಟ್ಟಿದ್ದಾನೆ.

loader