ಪಾನಮತ್ತ ವ್ಯಕ್ತಿಯೊಬ್ಬ ಸ್ವಂತ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಬಗೆದು, ಅದನ್ನು ಚಟ್ನಿ ಮತ್ತು ಕಾಳು ಮೆಣಸು ಬಳಸಿಕೊಂಡು ತಿಂದಿರುವವನೆನ್ನಲಾದ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಪುಣೆ: ಪಾನಮತ್ತ ವ್ಯಕ್ತಿಯೊಬ್ಬ ಸ್ವಂತ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಬಗೆದು, ಅದನ್ನು ಚಟ್ನಿ ಮತ್ತು ಕಾಳು ಮೆಣಸು ಬಳಸಿಕೊಂಡು ತಿಂದಿರುವವನೆನ್ನಲಾದ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ರಕ್ತಸಿಕ್ತ ಕೈಗಳೊಂದಿಗೆ ಮನೆಯಿಂದ ಹೊರಹೋಗಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಸುನೀಲ್ ಕುಚಕುರ್ನಿ ಈ ಕೃತ್ಯ ಎಸಗಿದ ಆರೋಪಿ. ಮೃತ ಮಹಿಳೆಯನ್ನು ಯಲ್ಲವ್ವ ಎಂದು ಗುರುತಿಸಲಾಗಿದೆ.
ಸುನೀಲ್ ಕಾರ್ಮಿಕನಾಗಿದ್ದು, ಮದುವೆಯಾಗಿ 3 ಮಕ್ಕಳನ್ನು ಹೊಂದಿದ್ದಾನೆ. ಆತನ ಪತ್ನಿ ಮುಂಬೈಯಲ್ಲಿ ಹೆತ್ತವರ ಮನೆಯಲ್ಲಿದ್ದಾಳೆ. ಘಟನೆಯ ದಿನ, ಸುನೀಲ್ ಕುಡಿದು ಬಂದು ತಾಯಿಯ ಬಳಿ ಆಹಾರ ಕೇಳಿದ್ದಾನೆ. ಈ ವೇಳೆ ಇಬ್ಬರಿಗೂ ಜಗಳವಾಗಿದೆ. ಕೋಪದ ಭರದಲ್ಲಿ ತಾಯಿಗೇ ಇರಿದಿದ್ದಾನೆ. ಬಳಿಕ ಆಕೆಯೆ ಹೃದಯವನ್ನು ಬಗೆದು, ಅದಕ್ಕೆ ಚಟ್ನಿ ಮತ್ತು ಕಾಳುಮೆಣಸಿನ ಪುಡಿ ಹಾಕಿ ತಿಂದಿದ್ದಾನೆ.
