ಶನಿವಾರ ಸಂತೆಯಲ್ಲಿ ಆಯುಧಪೂಜೆಗೆ ಎಂದು ತನ್ನ ಕಾರನ್ನು ಸರ್ವೀಸ್‌'ಗೆ ಕೊಟ್ಟಿದ್ದ ಸುರೇಶ್ ಎಂಬಾತ ಕೂಡಲೇ ಸರ್ವಿಸ್ ಮಾಡಿಕೊಡು ಅಂತಾ ಕೇಳಿದ್ದಾನೆ. ಕೆಲ ಹೊತ್ತು ಬಿಟ್ಟು ಬರುವಂತೆ ಸರ್ವೀಸ್ ಸೆಂಟರ್ ಮಾಲೀಕ ಅಬ್ದುಲ್ ಹೇಳಿದ್ದ. ಆದರೆ, ಅಂದಾಜು 11ಗಂಟೆಯಾದರೂ ವಾಹನ ಸರ್ವಿಸ್ ಆಗಿರಲಿಲ್ಲ. ಇದರಿಂದ ಕೋಪಗೊಂಡ ಸುರೇಶ್ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಅಬ್ದುಲ್ ತನ್ನ ಮನೆಯಲ್ಲಿದ್ದ ಲೈಸನ್ಸ್ ರಿವಾಲ್ವಾರ್‌'ನಿಂದ ಸುರೇಶ್ ಎದೆ ಮತ್ತು ಬೆನ್ನಿಗೆ ಫೈರ್ ಮಾಡಿದ್ದಾನೆ.
ಮಡಿಕೇರಿ(ಅ.11): ಶನಿವಾರ ಸಂತೆಯಲ್ಲಿ ಆಯುಧಪೂಜೆಗೆ ಎಂದು ತನ್ನ ಕಾರನ್ನು ಸರ್ವೀಸ್'ಗೆ ಕೊಟ್ಟಿದ್ದ ಸುರೇಶ್ ಎಂಬಾತ ಕೂಡಲೇ ಸರ್ವಿಸ್ ಮಾಡಿಕೊಡು ಅಂತಾ ಕೇಳಿದ್ದಾನೆ. ಕೆಲ ಹೊತ್ತು ಬಿಟ್ಟು ಬರುವಂತೆ ಸರ್ವೀಸ್ ಸೆಂಟರ್ ಮಾಲೀಕ ಅಬ್ದುಲ್ ಹೇಳಿದ್ದ. ಆದರೆ, ಅಂದಾಜು 11ಗಂಟೆಯಾದರೂ ವಾಹನ ಸರ್ವಿಸ್ ಆಗಿರಲಿಲ್ಲ. ಇದರಿಂದ ಕೋಪಗೊಂಡ ಸುರೇಶ್ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಅಬ್ದುಲ್ ತನ್ನ ಮನೆಯಲ್ಲಿದ್ದ ಲೈಸನ್ಸ್ ರಿವಾಲ್ವಾರ್'ನಿಂದ ಸುರೇಶ್ ಎದೆ ಮತ್ತು ಬೆನ್ನಿಗೆ ಫೈರ್ ಮಾಡಿದ್ದಾನೆ.
ಟಿಂಬರ್ ವ್ಯಾಪಾರಿಯಾಗಿದ್ದ ಸುರೇಶ್, ತನ್ನ ಮಗ ಧನು ಜೊತೆ ಬಂದಿದ್ದ. ರಿವಾಲ್ವರ್ ತಂದು ಗುಂಡು ಹಾರಿಸಿದ್ದ ಅಬ್ದುಲ್'ಗೆ ಸಹೋದರ ಅಬ್ದುಲ್ ಬಾಷಾ ಕೂಡಾ ಸಹಕರಿಸಿದ್ದನಂತೆ. ಈ ಸುದ್ದಿ ಹಬ್ಬುತ್ತಿದ್ದಂತೆ ಸುರೇಶ್ ಕಡೆಯವರು ರೊಚ್ಚಿಗೆದ್ದು ಅಬ್ದುಲ್ ಮನೆ, ವಾಹನ ಮತ್ತು ಸರ್ವಿಸ್ ಸ್ಟೇಷನ್ಗೆ ಬೆಂಕಿ ಹಚ್ಚಿದ್ದಾರೆ.
