ಹವಾಯಿ(ಸೆ.18): ಇತ್ತೀಚೆಗೆ ಯುವಕರಿಗೆ ಸಾಹಸಗಳನ್ನ ಮಾಡುವ ಕ್ರೇಜ್ ಹೆಚ್ಚಾಗಿದೆ. ಇದೇ ರೀತಿ ಯುವಕನೊಬ್ಬ ಸಾಹಸ ಮಾಡಲು ಹೋಗಿದ್ದು, ಜಲಪಾತದಿಂದ ಧುಮುಕಿ ತನ್ನ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ.
ಹೌದು 21 ವರ್ಷದ ಯುವಕನೊಬ್ಬ ಕ್ಯಾಲಿಫೋರ್ನಿಯಾದ ಹವಾಯಿನಲ್ಲಿರುವ ಬರೋಬ್ಬರಿ 200 ಅಡಿ ಎತ್ತರವಿರುವ ವೈಲುಯಾ ಜಲಪಾತದಿಂದ ಹಾರಿದ್ದಾನೆ. ಸಾಹಸ ಮಾಡುವ ಕ್ರೇಜ್‍ನಿಂದ ಹಾರಿದ ಆತ 200 ಅಡಿ ಕೆಳಗೆ ಬಿದ್ದಿದ್ದಾನೆ, ಬಿದ್ದ ರಭಸಕ್ಕೆ ಆತನ ಪ್ರಜ್ಞೆ ತಪ್ಪಿದೆ. ಬಚಾವಾಗಿದ್ದು ಹೇಗೆ?: ಕೆಳಗೆ ಹಾರಿದ್ರೆ ಏನಾಗಬಹುದೆಂಬ ಯೋಚನೆ ಮಾಡದೇ ಹಾರಿದ ಆತ 200 ಅಡಿ ಕಳಗೆ ಧುಮುಕಿದಾಗ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆದರೆ ಕಳೆಗಿದ್ದ ಪ್ರವಾಸಿಗರು ಆತನನ್ನು ದಡಕ್ಕೆ ತೆಗೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಹಾರಿದ ವಿಡಿಯೋವನ್ನ ಜಲಪಾತದ ಮೇಲಿನಿಂದ ಗೆಳೆಯನೊಬ್ಬ ಸೆರೆಹಿಡಿದಿದ್ದಾನೆ.
