Asianet Suvarna News Asianet Suvarna News

ತನ್ನ ಜನನಾಂಗಕ್ಕೆ 15 ಸೂಚಿಗಳನ್ನು ಚುಚ್ಚಿಕೊಂಡ ಭೂಪ,ವರ್ಷದಿಂದ ಆಗಾಗ ಒಂದೊಂದೆ ಚುಚ್ಚಿಕೊಳ್ಳುತ್ತಿದ್ದ: ಕಾರಣವೇನು ?

ಸುಮಾರು 2 ಗಂಟೆ ಅತೀ ಜಗರೂಕವಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಯಶಸ್ವಿಯಾಗಿ 15 ಸೂಚಿಗಳನ್ನು ಹೊರತೆಗೆದಿದ್ದಾರೆ.

Man inserts 15 needles into penis rushed to hospital
  • Facebook
  • Twitter
  • Whatsapp

ನವದೆಹಲಿ(ಜೂ.25): ವಿಚಿತ್ರ ಪ್ರಕರಣದಲ್ಲಿ ವಿಲಕ್ಷಣ ಮನಸ್ಥಿತಿ ಹೊಂದಿದ 35 ವರ್ಷದ ಭೂಪನೊಬ್ಬ ತನ್ನ ಶಿಶ್ನಕ್ಕೆ 15 ಸೂಜಿಗಳನ್ನು ಚುಚ್ಚಿಕೊಂಡಿರುವ ಘಟನೆ ಚೀನಾದ ಶೆನ್ಯಾಂಗ್ ಮಿಲಿಟರಿ ಪ್ರದೇಶದಲ್ಲಿ ನಡೆದಿದೆ. ಇನ್ನೊಂದು ವಿಷಯವೆಂದರೆ ಈತ ಒಂದು ವರ್ಷದಿಂದ ಆಗಾಗ ತನ್ನ ಜನನಾಂಗಕ್ಕೆ ಸೂಚಿ ಚುಚ್ಚಿಕೊಳ್ಳುತ್ತ ಬಂದಿದ್ದಾನೆ.

ಮೂತ್ರವಾಗಲು ಕಷ್ಟವಾಗಿ ಜನನಾಂಗದಲ್ಲಿ ನೋವು ತೀರ ಹೆಚ್ಚಾಗಿ ರಕ್ತ ಸೋರಲು ಪ್ರಾರಂಭಿಸಿದಾಗ ಕೆಲವು ದಿನಗಳ ಹಿಂದಷ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾನೆ. ಸುಮಾರು 2 ಗಂಟೆ ಅತೀ ಜಗರೂಕವಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಯಶಸ್ವಿಯಾಗಿ 15 ಸೂಚಿಗಳನ್ನು ಹೊರತೆಗೆದಿದ್ದಾರೆ.

ವೈದ್ಯರ ಪ್ರಕಾರ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ನೋವಿನಲ್ಲೂ ಲೈಂಗಿಕ ಸುಖ ಪಡೆಯಲು ಿಲ್ಲವೆ ಅಸಹಜ ಲೈಂಗಿಕ ಕ್ರಿಯೆ ಪಡೆಯಲು ಒಂದು ವರುಷದಿಂದ ಆಗಾಗ ಸೂಚಿಗಳನ್ನು ಚುಚ್ಚಿಕೊಳ್ಳುತ್ತಿದ್ದ. ಎಕ್ಸರೆ ವರದಿಗಳ ಪ್ರಕಾರ ಈತ ಚುಚ್ಚಿಕೊಂಡ ಸೂಚಿಗಳು ಮೂತ್ರ ದ್ವಾರವನ್ನು ಪ್ರವೇಶಿಸಿವೆ. ಕೆಲವೊಂದು ಸೂಚಿಗಳು 10 ಸೆ.ಮೀ.ನಷ್ಟು ಉದ್ದವಿದ್ದವು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios