ಪುಣೆಯಲ್ಲಿ 1 ಕೋಟಿ ರು. ಪಂಗನಾಮ ಮತ್ತು 2002 ರಲ್ಲಿ 1 ಲಕ್ಷ ರು. ಉಂಡೆನಾಮ ಹಾಕಿ ಪರಾರಿಯಾಗಿದ್ದ ವ್ಯಕ್ತಿಯೋರ್ವ ಬುಧವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪುಣೆ (ಡಿ.28): ಪುಣೆಯಲ್ಲಿ 1 ಕೋಟಿ ರು. ಪಂಗನಾಮ ಮತ್ತು 2002 ರಲ್ಲಿ 1 ಲಕ್ಷ ರು. ಉಂಡೆನಾಮ ಹಾಕಿ ಪರಾರಿಯಾಗಿದ್ದ ವ್ಯಕ್ತಿಯೋರ್ವ ಬುಧವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಪೊಲೀಸರ ಕೈಗೆ ಸಿಗಬಾರದು ಎಂದು ವಾಷಿಂಗ್ ಮಶಿನ್‌ನಲ್ಲಿ ಅಡಗಿಕೊಂಡಿದ್ದ ಅನ್ನೋದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2002ರಲ್ಲಿ ತಲೆ ಮರೆಸಿಕೊಂಡಿದ್ದ ವಂಚಕನ ಬಂಧನಕ್ಕಾಗಿ ಮುಂಬೈ ಪೊಲೀಸರು ಬಲೆ ಬೀಸಿದ್ದರು. ಇದರ ಪ್ರಕಾರ, ಆರೋಪಿ ನಿವಾಸಕ್ಕೆ ಬಂದ ಪೊಲೀಸರು, ಹುಡುಕಾಟ ನಡೆಸಿದ್ದರು.

ಮನೆ ಎಲ್ಲ ಹುಡುಕಿದ್ರೂ, ಆರೋಪಿ ಪತ್ತೆಯಾಗಿರಲಿಲ್ಲ. ಕೊನೆಗೇ ಬಟ್ಟೆ ಒಗೆಯುವ ಮಶಿನ್‌ನಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.