ಬೆಂಗಳೂರು: ರಸ್ತೆಯಲ್ಲಿ ನಿಂತು ಇಸ್ಲಾಂ ಧರ್ಮ ಗ್ರಂಥ ‘ಕುರಾನ್’ನ ಪೇಪರ್ ಹರಿದು ಎಸೆಯುತ್ತಿದ್ದ ಆರೋಪಿ ಯೊಬ್ಬನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. 

ಲಿಂಗರಾಜಪುರ ನಿವಾಸಿ ಶೇಕ್ ಇರ್ಫಾನ್ ಮಹಮದ್ (24) ಬಂಧಿತ. ಆರೋಪಿ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ವೆಲ್ಡಿಂಗ್ ಕೆಲಸ ಮಾಡುವ ಶೇಕ್ ಶನಿವಾರ ಬೆಳಗ್ಗೆ 11ರ ಸುಮಾರಿಗೆ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಸಿಗ್ಮಾ ಮಾಲ್‌ನ ಬಳಿ ಪೇಪರ್ ಚೂರುಗಳನ್ನು ಎಸೆಯುತ್ತಿದ್ದ. ವ್ಯಕ್ತಿಯೊಬ್ಬರು ಆತನ ಬಳಿ ಹೋದಾಗ ಪರಾರಿಯಾಗಲು ಯತ್ನಿಸಿದ್ದಾನೆ.

ಆತನನ್ನು ಹಿಡಿದು ಜೇಬನ್ನು ಪರಿಶೀಲನೆ ನಡೆಸಿದಾಗ ಕುರಾನ್ ಪೇಪರ್‌ಗಳಿರುವುದು ಪತ್ತೆಯಾಗಿದೆ. ಬಳಿಕ ಸಾರ್ವಜನಿಕರು ಆರೋಪಿಯನ್ನು ಹೈಗ್ರೌಂಡ್ಸ್ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.