ಭುವನೇಶ್ವರ, (ಜೂ.23): ಪತ್ನಿಯೊಂದಿಗಿನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ಪತಿ ಮಹಾಶಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯನ್ನು ಭುವನೇಶ್ವರದ ಖಂದಗಿರಿ ಉದಿತ್‌ ನಾರಾಯಣ್‌ ಭಟ್‌(25) ಎಂದು ಗುರುತಿಸಲಾಗಿದೆ.  ಆರೋಪಿಯ ಪತ್ನಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೊ: ನ್ಯಾಯ ದಕ್ಕಿಸಿಕೊಂಡ ಮಹಿಳೆ?

ಉದಿತ್ ನಾರಾಯಣ್ ಭಟ್ ಎಂಬಾತ ಮಹಿಳೆಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದ.  ಬಳಿಕ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪ ಉಂಟಾಗಿ ಬೇರೆ-ಬೇರೆಯಾಗಿದ್ದರು. 

ಇದೇ ಸಿಟ್ಟಿನಲ್ಲಿ ನಾರಾಯಣ್‌ ಭಟ್‌, ಬೇರೆಯಾದ ಕೆಲ ದಿನಗಳ ಬಳಿಕ ತನ್ನ ಪತ್ನಿಯೊಂದಿಗಿನ ಬೆಡ್‌ರೂಂ ಖಾಸಗಿ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದ.

ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಪತ್ನಿ, ಪತಿ ನಾರಾಯಣ್ ಭಟ್  ವಿರುದ್ಧ ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆಯ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.