ಆಭರಣ ಕೊಡಿಸುವುದಾಗಿ ಹೇಳಿ ಇಬ್ಬರನ್ನೂ ಕಾರಿಗೆ ಹತ್ತಿಸಿಕೊಂಡು ದೀಪಾ ರಾಮ್ ಕರದೊಯ್ದಿದ್ದ. ಕಾರಿನಲ್ಲೇ ಆತ ಇಬ್ಬರ ಜೊತೆಗೂ ವಾಗ್ವಾದ ನಡೆಸಿದ್ದ. ಬಳಿಕ ತಾನು ಕಾರಿಂದ ಇಳಿದು, ಕಾರನ್ನು ಲಾಕ್ ಮಾಡಿದ್ದಾನೆ. ನಂತರ ಕಾರಿಗೆ ಬೆಂಕಿ ಹಚ್ಚಿ, ಇಬ್ಬರನ್ನೂ ಜೀವಂತ ಸುಟ್ಟುಹಾಕಿದ್ದಾನೆ.

ಜೈಪುರ(ಡಿ.21): ತನ್ನ ಇಬ್ಬರೂ ಪತ್ನಿಯರು, ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬ, ಇಬ್ಬರು ಪತ್ನಿಯರನ್ನು ಕಾರಿನಲ್ಲಿ ಕೂಡಿಹಾಕಿ ಅವರನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ.

ಹತ್ಯೆಯನ್ನು ಪತಿ ದೀಪಾರಾಮ್ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೀಪಾ ರಾಮ್‌'ಗೆ, ದರಿಯಾ ದೇವಿ (25) ಮತ್ತು ಮಾಲಿ ದೇವಿ (27) ಎಂಬ ಇಬ್ಬರು ಪತ್ನಿಯರು ಇದ್ದರು. ಆದರೆ ಇಬ್ಬರೂ ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ದೀಪಾರಾಮ್'ಗೆ ತೀವ್ರ ಆಕ್ರೋಶ ಇತ್ತು.

ಈ ಹಿನ್ನೆಲೆಯಲ್ಲಿ ಆಭರಣ ಕೊಡಿಸುವುದಾಗಿ ಹೇಳಿ ಇಬ್ಬರನ್ನೂ ಕಾರಿಗೆ ಹತ್ತಿಸಿಕೊಂಡು ದೀಪಾ ರಾಮ್ ಕರದೊಯ್ದಿದ್ದ. ಕಾರಿನಲ್ಲೇ ಆತ ಇಬ್ಬರ ಜೊತೆಗೂ ವಾಗ್ವಾದ ನಡೆಸಿದ್ದ. ಬಳಿಕ ತಾನು ಕಾರಿಂದ ಇಳಿದು, ಕಾರನ್ನು ಲಾಕ್ ಮಾಡಿದ್ದಾನೆ. ನಂತರ ಕಾರಿಗೆ ಬೆಂಕಿ ಹಚ್ಚಿ, ಇಬ್ಬರನ್ನೂ ಜೀವಂತ ಸುಟ್ಟುಹಾಕಿದ್ದಾನೆ.