ಬಿರಿಯಾನಿ ಪ್ರಪಂಚದ ಅತಿ  ರುಚಿಕರ ಆಹಾರ ಎಂಬುದನ್ನು ಸಾಬೀತಾಯಿತೆ? ಅದು ಏನೇ ಇರಲಿ ಈ ವ್ಯಕ್ತಿ ತನ್ನ ಆಸೆ ಹಂಚಿಕೊಂಡ ಕತೆಯನ್ನು ಕೇಳಲೇಬೇಕು. ಕತೆ ಕಣ್ಣಲ್ಲಿ ನೀರು ತರಿಸಿದರೂ ಆಹಾರದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

ದುಬೈ[ಸೆ.24] ಮಾರಕ ಕ್ಯಾನ್ಸರ್ ಗೆ ಸಿಕ್ಕು ಆಪರೇಶನ್ ಬೆಡ್ ಮೇಲೆ ಮಲಗಿದ್ದ ಆತನ ಹೊಟ್ಟೆಯನ್ನೇ ಕತ್ತರಿಸಿ ತೆಗೆಯಬೇಕು ಎಂದು ವೈದ್ಯರು ನಿರ್ಧಾರ ಮಾಡಿದ್ದರು. 

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗುಲಾಮ್ ಅಬ್ಬಾಸ್ ಗೆ ನೀನು ಇನ್ನು ಕೆಲ ಕಾಲ ಬದುಕಬೇಕು ಎಂದರೆ ನಿನ್ನ ಹೊಟ್ಟೆ ಕತ್ತರಿಸಿ ತೆಗೆಯಬೇಕು ಎಂದು ಹೇಳಲಾಗಿತ್ತು. ಆತ ಹೊಟ್ಟೆ ಕತ್ತರಿಸಿಕೊಳ್ಳಲು ಒಪ್ಪಿಕೊಂಡ.

ಆದರೆ ನನ್ನ ಹೊಟ್ಟೆಯನ್ನು ಕತ್ತರಿಸಿ ಹಾಕುವ ಮುನ್ನ ಒಂದು ಪ್ಲೇಟ್ ಚಿಕನ್ ಬಿರಿಯಾನಿ ತಿನ್ನಬೇಕು ಎಂಬ ಬೇಡಿಕೆ ಇಟ್ಟ. ದುಬೈನಲ್ಲಿನ ಈ ಪ್ರಕರಣ ಕಣ್ಣಲ್ಲಿ ನೀರು ತರಿಸಿದರೂ ಗುಲಾಮ್ ಅಬ್ಬಾಸ್ ಅವರಿಗೆ ಅಂತಿಮವಾಗಿ ಬಿರಿಯಾನಿ ಸವಿಯಲು ಅವಕಾಶ ಮಾಡಿಕೊಟ್ಟಿತು.