ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ [ಸೋಮವಾರ]  ತಡರಾತ್ರಿ ಭೀಕರ ಹತ್ಯೆ ನಡೆದಿದೆ. ಇದನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಬೆಂಗಳೂರು, [ನ.20]: ಮಾರಕಾಸ್ತ್ರಗಳಿಂದ ಕೊಚ್ಚಿ ಬಾಡಿ ಬಿಲ್ಡರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ [ಸೋಮವಾರ] ತಡರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಾಜಿನಗರದ ಹಳೆ ಸಿಮೇಂಟ್ರಿ ರಸ್ತೆಯಲ್ಲಿ ಕೊಲೆ ನಡೆದಿದ್ದು, ಇರ್ಫಾನ್ ಅಲಿಯಾಸ್ ಮಚ್ಚಿ ಕೊಲೆಯಾದ ಯುವಕ.

ಇರ್ಫಾನ್ ಜಿಮ್ ಮುಗಿಸಿ ಬರುವಾಗ ಮೂವರು ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಂತರ ತೀವ್ರ ಗಾಯದಿಂದ ಬಿದ್ದಿದ್ದ ಇರ್ಫಾನ್, ಪತ್ನಿ ರೋಷನ್ ಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ.

ಆದರೆ, ಮನೆಯವರೆಲ್ಲ ಬರುವಷ್ಟರಲ್ಲಿ ಇರ್ಫಾನ್ ಜೀವ ಹೋಗಿತ್ತು. ಅಕ್ವೇರಿಯಂ ಶಾಪ್ ಇಟ್ಟುಕೊಂಡಿದ್ದ ಇರ್ಫಾನ್. ಹುಡುಗಿ ವಿಚಾರವಾಗಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. 

ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.