ಪತ್ನಿಗೆ ಲವರ್’ನನ್ನು ವರಿಸುವಂತೆ ಸೂಸೈಡ್ ಲೆಟರ್’ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತಿ

Man ends life asks wife to marry lover in suicide note
Highlights

ಹೈದ್ರಾಬಾದ್’ನಲ್ಲಿ ವ್ಯಕ್ತಿಯೋರ್ವ ಸೂಸೈಡ್ ಲೆಟರ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು, ಕೆ. ಆಚಾರ್ಯ ಎಂಬ  ಈ ವ್ಯಕ್ತಿ ತನ್ನ ಸೂಸೈಡ್ ಲೆಟರ್’ನಲ್ಲಿ ಪತ್ನಿಗೆ ಆಕೆಯ ಲವರ್’ನನ್ನು ವರಿಸುವಂತೆ  ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ.

ಹೈದ್ರಾಬಾದ್ : ಹೈದ್ರಾಬಾದ್’ನಲ್ಲಿ ವ್ಯಕ್ತಿಯೋರ್ವ ಸೂಸೈಡ್ ಲೆಟರ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು, ಕೆ. ಆಚಾರ್ಯ ಎಂಬ  ಈ ವ್ಯಕ್ತಿ ತನ್ನ ಸೂಸೈಡ್ ಲೆಟರ್’ನಲ್ಲಿ ಪತ್ನಿಗೆ ಆಕೆಯ ಲವರ್’ನನ್ನು ವರಿಸುವಂತೆ  ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ.

ಹೈದ್ರಾಬಾದ್’ನ ಯದಾದ್ರಿ ಬೊಂಗಿರ್ ಪ್ರದೇಶದಲ್ಲಿ  ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ 2 ವರ್ಷದ ಹಿಂದೆ ಉಷಾರಾಣಿ ಎಂಬಾಕೆಯನ್ನು ವಿವಾಹವಾಗಿದ್ದ ಆಚಾರ್ಯಗೆ ಒಂದು ವರ್ಷದ ಹೆಣ್ಣು ಮಗುವೂ ಕೂಡ ಇದೆ.

ಬುಧವಾರ ಈ ವ್ಯಕ್ತಿ ತನ್ನ ತಂದೆಗೆ ಸಂದೇಶವೊಂದನ್ನು ಕಳುಹಿಸಿದ್ದು, ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಅವರ ತಂದೆ ತಿರುಗಿ ಕರೆ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿದ್ದಾಗಿ ಅವರ ತಂದೆ ಹೇಳಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ಆತ್ಮಹತ್ಯೆಗೆ ಕಾರಣ ತನ್ನ ಪತ್ನಿಯ ಅಕ್ರಮ ಸಂಬಂಧ ಎಂದು ತಂದೆಗೆ ಎಸ್’ಎಂಎಸ್’ನಲ್ಲಿ ತಿಳಿಸಿದ್ದಾರೆ.  

loader