ಶಿಕಾರಿಯಲ್ಲಿ ಗುಂಡು ತಗುಲಿ ವ್ಯಕ್ತಿ ಸಾವು
ಚಿಕ್ಕಮಗಳೂರು(ಸೆ.16): ಶಿಕಾರಿಗೆ ತೆರಳಿದಾಗ ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಹೊನ್ನೇಕುಡಿಗೆ ಗ್ರಾಮದ ಅಡ್ಡಟ್ಟಿ ಕಾಡಿನಲ್ಲಿ ನಡೆದಿದೆ.
ಧರ್ಮಯ್ಯ 55 ಮೃತ ವ್ಯಕ್ತಿ. ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಶಿಕಾರಿಗೆಂದು ಧರ್ಮಯ್ಯ ಹಾಗೂ ಗಂಗಾಧರ ಎಂಬುವವರು ತೆರಳಿದ್ದರು. ಈ ವೇಳೆಯಲ್ಲಿ ಶಿಕಾರಿಯಾಡುವಾಗ ಧರ್ಮಯ್ಯ'ಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎನ್.ಆರ್. ಪುರ ಪೊಲೀಸರು ದೂರು ದಾಖಲಿಸಿಕೊಂಡು ಗಂಗಾಧರ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
