ಎರಡು ದಿನದಿಂದ ಆತನ ಮನೆಯವರು ಹಾಗೂ ಗ್ರಾಮಸ್ಥರು ಮನವೊಲಿಕೆಗೆ ಪ್ರಯತ್ನಿಸಿದರೂ ಆತ ಜಪ್ಪಯ್ಯ ಅನ್ನುತ್ತಿಲ್ಲ.

ಕೂಡ್ಲಿಗಿ(ಅ.08): ಹೆತ್ತವರು ಮದುವೆ ಮಾಡಿಸುತ್ತಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ 60 ಅಡಿ ಎತ್ತರದ ಮರವೇರಿ ಕುಳಿತು ಎರಡು ದಿನ ಅಲ್ಲೇ ಠಿಕಾಣಿ ಹೂಡಿದ್ದ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಯಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಗ್ರಾಮದ ಬಸವರಾಜ್ (30) ಮರವೇರಿ ಕುಳಿತ ಯುವಕ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಮಾಡಿ ಎಂದರೂ ಮನೆಯವರು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿರುವ ಯುವಕ ಶುಕ್ರವಾರ ಬೆಳಗ್ಗೆ ಗ್ರಾಮದ ಮಧ್ಯದಲ್ಲಿರುವ 60 ಅಡಿ ಎತ್ತರದ ಬೇವಿನ ಮರ ಏರಿ ರೆಂಬೆಯೊಂದರ ಮೇಲೆ ಕುಳಿತಿದ್ದಾನೆ. ಎರಡು ದಿನದಿಂದ ಆತನ ಮನೆಯವರು ಹಾಗೂ ಗ್ರಾಮಸ್ಥರು ಮನವೊಲಿಕೆಗೆ ಪ್ರಯತ್ನಿಸಿದರೂ ಆತ ಜಪ್ಪಯ್ಯ ಅನ್ನುತ್ತಿಲ್ಲ. ಶನಿವಾರವೂ ಮನವೊಲಿಕೆಗೆ ಬಗ್ಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹರಸಾಹಸ ಪಟ್ಟು ಆತನಿಗೆ ಮದುವೆ ಮಾಡುವ ಭರವಸೆ ನೀಡಿ ಸಂಜೆ ವೇಳೆ ಕೆಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ.