ಗುವಾಹಟಿ[ಜೂ.22]: ಆತ್ಮಹತ್ಯೆಗೆಂದು ನದಿಗೆ ಹಾರಿದ ಯುವಕನೊಬ್ಬ 100 ಕಿ.ಮೀ ಈಜಿದ ಅಚ್ಚರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಬಕ್ಸಾ ಜಿಲ್ಲೆಯ ಲಕ್ಮನ್‌ ಎಂಬಾತ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಬ್ರಹ್ಮಪುತ್ರ ನದಿಗೆ ಹಾರಿದ್ದ. ನದಿಗೆ ಹಾರಿದ ಮೆಲೇ ಅಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿದ ತಾವರೆ ಎಲೆ ರೀತಿಯ ಎಲೆ ಕಂಡಿದ್ದಾರೆ. ಕೊನೆಗೆ ಅದನ್ನು ಇಟ್ಟುಕೊಂಡೇ ಆತ ರಾತ್ರಿಯಿಡೀ ಈಜಿ ಮರುದಿನ ಬೆಳಗ್ಗೆ ಪೆಟಾ ಜಿಲ್ಲೆ ತಲುಪಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ.

ಸಾಯಲು ಯತ್ನಿಸಿದರೂ ಬದುಕಿಬಂದ ಲಕ್ಮನ್‌ ಇದೀಗ ನಿಶ್ಯಕ್ತಿಯಿಂದ ಆಸ್ಪತ್ರೆ ಸೇರಿದ್ದಾನೆ. ಆದರೆ ಈತನ ಕಥೆ ಇದೀಗ ಭಾರೀ ಸುದ್ದಿಯಾಗಿದೆ.