ದೇವಸ್ಥಾನದ ಹುಂಡಿ ಕದಿಯೋಕೆ ವಿಫಲ ಯತ್ನ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರು(ಮಾ.28): ದೇವಸ್ಥಾನದ ಹುಂಡಿ ಕದಿಯೋಕೆ ವಿಫಲ ಯತ್ನ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ನಿನ್ನೆ ದೀಪಾಂಜಲಿನಗರದ ಆಂಜನೇಯ ದೇವಸ್ಥಾನಕ್ಕೆ ಕಳ್ಳನೊಬ್ಬ ಕದಿಯಲು ಬಂದಿದ್ದಾನೆ. ಬಾಗಿಲು ಮುರಿದು ಒಳ ಹೋಗಲು ಯತ್ನಿಸುತ್ತಿರುವಾಗಲೇ ಅದನ್ನು ಕಂಡ ಆಟೋ ಡ್ರೈವರ್ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಷ್ಟರಲ್ಲಿ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಸಹ ನಾ ಮುಂದು ತಾ ಮುಂದು ಎಂದು ಹಿಗ್ಗಾಮುಗ್ಗ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಬ್ಯಾಟರಾಯನ ಪುರ ಪೊಲೀಸರು ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
