Asianet Suvarna News Asianet Suvarna News

ಹೆತ್ತ ತಾಯಿಯ ರುಂಡ ಕಡಿದ ಕ್ರೂರಿ ಮಗ : ಕಾರಣ ಕೇಳಿದ್ದಕ್ಕೆ ಏನು ಹೇಳಿದ ಗೊತ್ತೆ ?

35 ವರ್ಷದ ಪುಲಿಯಾ ಮಹತೊ ಎಂಬ ದುಷ್ಟ ಮಗ ತನ್ನ 55 ವರ್ಷದ ತಾಯಿಯು ಶುಕ್ರವಾರ ಸಂಜೆ ಕಾಳಿ ದೇವಿಯ ಮಂದಿರವನ್ನು ಸ್ವಚ್ಛಗೊಳಿಸುತ್ತಿರುವಾಗ ಹಿಂದಿನಿಂದ ಬಂದು ಬಲವಾದ ಆಯುಧದಿಂದ ಆಕೆಯ ತಲೆಯನ್ನು ಕಡಿದಿದ್ದಾನೆ.

Man beheads mother in human sacrifice in West Bengals Purulia
  • Facebook
  • Twitter
  • Whatsapp

ಪುರುಲಿಯಾ(.09): ಕ್ರೂರಿ ಮಗನೊಬ್ಬ ಜೀವನವಿಡಿ ಹೆತ್ತು,ಹೊತ್ತು ಸಾಕಿ ಸಲುಹಿದ ತಾಯಿಯ ರುಂಡ ಕಡಿದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ.

35 ವರ್ಷದ ಪುಲಿಯಾ ಮಹತೊ ಎಂಬ ದುಷ್ಟ ಮಗ ತನ್ನ 55 ವರ್ಷದ ತಾಯಿಯು ಶುಕ್ರವಾರ ಸಂಜೆ ಕಾಳಿ ದೇವಿಯ ಮಂದಿರವನ್ನು ಸ್ವಚ್ಛಗೊಳಿಸುತ್ತಿರುವಾಗ ಹಿಂದಿನಿಂದ ಬಂದು ಬಲವಾದ ಆಯುಧದಿಂದ ಆಕೆಯ ತಲೆಯನ್ನು ಕಡಿದಿದ್ದಾನೆ. ಕೆಲವು ಗಂಟೆಯ ನಂತರ ದೇಗುಲಕ್ಕೆ ಇನ್ನೊಬ್ಬ ಮಗ ಬಂದು ನೋಡಿದಾಗ ತಾಯಿಯ ರುಂಡ ಮತ್ತು ಮುಂಡ ರಕ್ತಸಿಕ್ತವಾಗಿ ಬೇರೆ ಬೇರೆ ಕಡೆ ಬಿದ್ದಿತ್ತು. ಗಾಭರಿಯಾದ ಈತ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪೊಲೀಸರು ಬಂದು ಹಂತಕ ಮಗನನ್ನು ಮೊದಲು ಪ್ರಶ್ನಿಸಿದ್ದಾರೆ. ಆಗ ಈತ ತನ್ನ ತಾಯಿಯೇ ಸ್ವತಃ ಶಿರಶ್ಚೇದನ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ಕೊಟ್ಟಿದ್ದ. ಆದರೆ ರುಂಡ,ಮುಂಡ ಬಿದ್ದಿರುವ ಸ್ಥಳ ದೂರವಿರುವ ಕಾರಣ ಅನುಮಾನಗೊಂಡ ಪೊಲೀಸರು ವಿಚಾರಣೆಗೊಳಪಡಿಸಿದಾಗ ತಾನೆ ಕಡಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕಾರನ ಕೇಳಿದ್ದಕ್ಕೆ ' ' ಕೊಲೆ ಮಾಡುವ ಹಿಂದಿನ ರಾತ್ರಿ ಕಾಳಿ ದೇವಿ ತನ್ನ ಕನಸಿನಲ್ಲಿ ಬಂದು ನಿನ್ನ ತಾಯಿಯನ್ನು ಕೊಂದರೆ ನಿನ್ನ ಹಾಗೂ ನಿನ್ನ ಕುಟುಂಬ ಸುಖಮಯವಾಗುವುದು.ನೀವು ಅಭಿವೃದ್ಧಿ ಹೊಂದುತ್ತೀಯ' ಎಂದು ಹೇಳಿದ್ದಳು. ಈ ಕಾರಣಕ್ಕಾಗಿ ಕೊಲೆ ಮಾಡಿದೆ'ಎಂದು ತಿಳಿಸಿದ.

ತಾಯಿ ಹಂತಕನನ್ನು ಸ್ಥಳೀಯ ಪೊಲೀಸರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸ್ಥಳೀಯರು ಹೇಳಿಕೆಯ ಪ್ರಕಾರ ಈತ ಮಾಟಮಂತ್ರ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

(ಸಾಂದರ್ಭಿಕ   )

Follow Us:
Download App:
  • android
  • ios