ತಡರಾತ್ರಿ 12 ಗಂಟೆಗೆ ಸರಿಯಾಗಿ ರಾತ್ರಿ ಪಾಳಿ ಕೆಲಸ ಮುಗಿಸಿ ಬರುತ್ತಿದ್ದ ಯುವತಿಯರ ಮುಂದೆಯೇ ಈ ವ್ಯಕ್ತಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೇಟ್'ನ ಮುಂದೆ ನಿಂತು ಫೋನ್'ನಲ್ಲಿ ಸಂಭಾಷಣೆ ನಡೆಸುವಂತೆ ನಟಿಸಿ ಸ್ವಲ್ಪ ಹೊತ್ತಿನ ಬಳಿಕ ಅಸಭ್ಯವಾಗಿ ವರ್ತಿಸುತ್ತಲೇ ಹಾಸ್ಟೆಲ್ ಒಳಗೆ ನುಗ್ಗಿದ್ದಾನೆ.
ಬೆಂಗಳೂರು(ಅ.27): ಯುವತಿಯರ ಹಾಸ್ಟೆಲ್ ಮುಂದೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಕಾಕ್ಸ್ ಟೌನ್ ಬಳಿ ನಡೆದಿದೆ.
ತಡರಾತ್ರಿ 12 ಗಂಟೆಗೆ ಸರಿಯಾಗಿ ರಾತ್ರಿ ಪಾಳಿ ಕೆಲಸ ಮುಗಿಸಿ ಬರುತ್ತಿದ್ದ ಯುವತಿಯರ ಮುಂದೆಯೇ ಈ ವ್ಯಕ್ತಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೇಟ್'ನ ಮುಂದೆ ನಿಂತು ಫೋನ್'ನಲ್ಲಿ ಸಂಭಾಷಣೆ ನಡೆಸುವಂತೆ ನಟಿಸಿ ಸ್ವಲ್ಪ ಹೊತ್ತಿನ ಬಳಿಕ ಅಸಭ್ಯವಾಗಿ ವರ್ತಿಸುತ್ತಲೇ ಹಾಸ್ಟೆಲ್ ಒಳಗೆ ನುಗ್ಗಿದ್ದಾನೆ.
ಅಲ್ಲಿದ್ದ ಯುವತಿಯರು ಕಿರುಚಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.