ಶಾಸಕ ಮಂಕಾಳ ವೈದ್ಯ ಬಾಗಿಯಾಗಿದ್ದ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ  ಸಮೀಪ ನಾಡ ಬಾಂಬ್ ಸ್ಫೋಟ ಸಂಭವಿಸಿದೆ.

ಹೊನ್ನಾವರ : ಶಾಸಕ ಮಂಕಾಳ ವೈದ್ಯ ಭಾಗಿಯಾಗಿದ್ದ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಸಮೀಪ ನಾಡ ಬಾಂಬ್ ಸ್ಫೋಟ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೊಸಾದ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಂಬ್ ಎಸೆಯಲು ಬಂದವನ ಕೈಯಲ್ಲೇ ಸ್ಫೋಟವಾಗಿದೆ. ಬಾಂಬ್ ಎಸೆಯುವ ಮೊದಲೇ ಸ್ಫೊಟವಾಗಿದ್ದು, ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕೈಯಲ್ಲೇ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಬಾಂಬ್ ಎಸೆಯಲು ಬಂದವನ ಕೈ ಚೂರು ಚೂರಾಗಿದೆ. ಅಲ್ಲದೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ರೇಮಂಡ್ ಮಿರಾಂಡ್ ಎಂದು ಗುರುತಿಸಲಾಗಿದೆ.