ಹೈದರಾಬಾದ್[ಆ. 01] ಬೋನಿಗರ್ ಝೋನ್ ನ ವಿಶೇಷ ತನಿಖಾ ದಳ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ವ್ಯಕ್ತಿಯೊಬ್ಬನಿಂದ ಬರೋಬ್ಬರಿ 2 ಕೋಟಿ ರು. ಅಧಿಕ ಮೊತ್ತದ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ.

ಜಪ್ತಿ ಮಾಡಿದ ವಿದೇಶಿ ಹಣದ ಮೊತ್ತ ಬರೋಬ್ಬರಿ 2,93,27,265 ರೂ. ಅದು ಯಾವ ಕಾರಣಕ್ಕೆ ಈ ಪುಣ್ಯಾತ್ಮ ಇಷ್ಟೊಂದು ವಿದೇಶಿ ಹಣ ಇಟ್ಟುಕೊಂಡಿದ್ದನೋ ಗೊತ್ತಿಲ್ಲ. ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದು ತನಿಖೆ ಎದುರಿಸುತ್ತಿದ್ದಾನೆ.

3 ಬಿಲಿಯನ್ ಲೀ.ತೈಲ ಕಳ್ಳತನ: ಯಾರ ಮೇಲೆ ಇರಾನ್ ಅನುಮಾನ?

ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಈ ರೀತಿ ವಿದೇಶಿ ಹಣ ವಶಕ್ಕೆ ಪಡೆಯುವುದು ಸರ್ವೇ ಸಾಮಾನ್ಯ. ಆದರೆ ಈ ಸಾರಿ ಖಚಿತ ಮಾಹಿತಿ  ಪಡೆದು ದಾಳಿ ಮಾಡಿ ಹಣ ಜಪ್ತಿ  ಮಾಡಲಾಗಿದೆ.