ಕೋಲಾರಕ್ಕೂ ತಾಗಿತೆ ಭಯೋತ್ಪಾದಕರ ನಂಟು?

First Published 20, Jun 2018, 7:31 PM IST
Man Arrested in Kolar accusing Involved in Terrorist Activity
Highlights

ಮಂಗಳೂರು ಆಯಿತು ಭಟ್ಕಳ ಆಯಿತು ಇದೀಗ ಕೋಲಾರಕ್ಕೂ ಭಯೋತ್ಪಾದಕರ ನಂಟು ತಾಗಿತೆ? ಎನ್ನುವ ಪ್ರಶ್ನೆ ಬುಧವಾರ ಕೋಲಾರದ ಪೊಲೀಸರ ಕಾರ್ಯದ ನಂತರ ವ್ಯಕ್ತವಾಗಿದೆ. ಹಾಗಾದರೆ ಕೋಲಾರದ ಪೊಲೀಸರು ಮಾಡಿದ ಕೆಲಸ ಏನು? 

ಕೋಲಾರ [ಜೂ.20] ಮಂಗಳೂರು ಆಯಿತು ಭಟ್ಕಳ ಆಯಿತು ಇದೀಗ ಕೋಲಾರಕ್ಕೂ ಭಯೋತ್ಪಾದಕರ ನಂಟು ತಾಗಿತೆ? ಎನ್ನುವ ಪ್ರಶ್ನೆ ಬುಧವಾರ ಕೋಲಾರದ ಪೊಲೀಸರ ಕಾರ್ಯಾಚರಣೆ ನಂತರ ವ್ಯಕ್ತವಾಗಿದೆ.

ಭಯೋತ್ಪಾದನೆ ಚಟುವಟಿಕೆ ಪರವಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋಲಾರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದ ಆರ್ಥಿಕ ಮತ್ತು ಮಾದಕ ದ್ರವ್ಯ ಪೊಲೀಸ್ ದಳ ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿಯ ಗೋವಿಂದ ಎಂಬಾತನನ್ನು ಅನುಮಾನದ ಮೇಲೆ ಬಂಧಿಸಿದೆ.

ಆರೋಪಿಯಿಂದ ವಿವಿಧ ಕಂಪನಿಗೆ ಸೇರಿದ 35 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ತಿಂಗಳಿನಿಂದ ಹುಣಸನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ಗೋವಿಂದ ವಾಸವಿದ್ದ ಎಂಬ ಮಾಹಿತಿ ಗೊತ್ತಾಗಿದೆ.ಉಗ್ರ ಒಸಾಮಾ ಬಿನ್‌ ಲಾಡೆನ್ ಬಗ್ಗೆ ಮೆಚ್ಚುಗೆ ಇಟ್ಟುಕೊಂಡಿದ್ದ ಗೋವಿಂದ, ಮೋದಿ ಮನ್ ಕಿ ಬಾತ್ ಟೀಕಿಸುವ ಪೋಸ್ಟ್ ಗಳನ್ನು ಸಾಮಾಜಿಕ ತಾಣದಲ್ಲಿ ಹರಿದು ಬಿಡುತ್ತಿದ್ದ. 

loader