ಬೆಂಗಳೂರಿನಲ್ಲಿ ಕಾಮುಕನೊಬ್ಬ ಒಂಟಿಯಾಗಿದ್ದ ಯುವತಿ ಮನೆ ಬಾಗಿಲು ಬಡಿದು ಗಲಾಟೆ ಮಾಡಿದ ಘಟನೆ ಜಯನಗರ 5 ನೇ ಬ್ಲಾಕ್ ನಲ್ಲಿ ನಡೆದಿದೆ. ಅದೇ ಕಟ್ಟಡದಲ್ಲಿದ್ದ ಕಿರಣ ಎಂಬಾತ ಗಲಾಟೆ ಮಾಡಿದವ. ನಾಲ್ಕು ದಿನಗಳ ಹಿಂದೆ ಮನೆಗೆ ಬಂದಿದ್ದ ಯುವತಿಯನ್ನು ಗಮನಿಸಿದ ಈತ ಕಂಠಪೂರ್ತಿ ಕುಡಿದು ಬಾಗಿಲು ಬಡಿದಿದ್ದಾನೆ.
ಬೆಂಗಳೂರು: ಬೆಂಗಳೂರಿನಲ್ಲಿ ಕಾಮುಕನೊಬ್ಬ ಒಂಟಿಯಾಗಿದ್ದ ಯುವತಿ ಮನೆ ಬಾಗಿಲು ಬಡಿದು ಗಲಾಟೆ ಮಾಡಿದ ಘಟನೆ ಜಯನಗರ 5 ನೇ ಬ್ಲಾಕ್ ನಲ್ಲಿ ನಡೆದಿದೆ.
ಅದೇ ಕಟ್ಟಡದಲ್ಲಿದ್ದ ಕಿರಣ ಎಂಬಾತ ಗಲಾಟೆ ಮಾಡಿದವ. ನಾಲ್ಕು ದಿನಗಳ ಹಿಂದೆ ಮನೆಗೆ ಬಂದಿದ್ದ ಯುವತಿಯನ್ನು ಗಮನಿಸಿದ ಈತ ಕಂಠಪೂರ್ತಿ ಕುಡಿದು ಬಾಗಿಲು ಬಡಿದಿದ್ದಾನೆ. ಇದರಿಂದ ಗಾಬರಿಗೊಂಡ ಮನೆ ಮಾಲೀಕರು ಹಾಗೂ ಸಿರಿಯಲ್ ನಟ ಶ್ರೀಧರ್ಗೆ ಕರೆ ಮಾಡಿದ್ದಾಳೆ.
ಸ್ಥಳಕ್ಕೆ ಹೋದ ಶ್ರೀಧರ್ ಕಾಮುಕನನ್ನು ತರಾಟೆ ತೆಗೆದುಕೊಂಡಿದ್ದಾರೆ. ಯಾಕೆ ಹೀಗೆ ಮಾಡಿದೆ ಎಂದರೆ ‘ಬೈ ಮಿಸ್ಟೇಕ್’ ಅಂತಾ ಹೇಳಿದ್ದಾನೆ.
ನಟ ಶ್ರೀಧರ್ ಕಾಮುಕನ ಗಲಾಟೆಯನ್ನು ಚಿತ್ರೀಕರಣ ಮಾಡಿದ್ದಾರೆ. ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಕಿರಣರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
