* ಫೇಸ್‌ಬುಕ್‌ನಲ್ಲಿ ಅಪ್ರಾಪ್ತೆಯ ಸ್ನೇಹ ಬೆಳೆಸಿದ ಆರೋಪಿ* ತಾನಿದ್ದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಅತ್ಯಾಚಾರ* ಆಗಾಗ್ಗೆ ಕರೆ ಮಾಡಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯ* ಸೆಕ್ಸ್‌'ಗೆ ಒಪ್ಪದ ಅಪ್ರಾಪ್ತೆಗೆ ಆರೋಪಿಯಿಂದ ಜೀವಬೆದರಿಕೆ* ಬೇಸತ್ತ ಅಪ್ರಾಪ್ತೆಯಿಂದ ಪೊಲೀಸ್‌ ಠಾಣೆಗೆ ದೂರು

ಬೆಂಗಳೂರು: ಫೇಸ್‌ಬುಕ್‌ ಮೂಲಕ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಅದನ್ನು ಚಿತ್ರೀಕರಿಸಿಕೊಂಡು ಮತ್ತೆ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಭಾರತ ಮೂಲದ ಪ್ರಗದೀಷ್‌ (26) ಬಂಧಿತ ಆರೋಪಿ. ಜಾಹಿರಾತು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಅಪ್ರಾಪ್ತೆಯನ್ನು ಪರಿಚಯಿಸಿ​ಕೊಂಡಿದ್ದಾನೆ. ಬಳಿಕ ಅಪಾರ್ಟ್‌'ಮೆಂಟ್‌ ಒಂದಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಈ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ಆಗಾಗ್ಗ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಇದರಿಂದ ಬೇಸತ್ತ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಲ್ಸನ್‌'ಗಾರ್ಡನ್‌'ನ ಅಪಾರ್ಟ್‌ಮೆಂಟ್‌'ವೊಂದರಲ್ಲಿ ನೆಲೆಸಿರುವ ಅಪ್ರಾಪ್ತೆಯನ್ನು ನಾಲ್ಕು ವಾರಗಳ ಹಿಂದಷ್ಟೇ ಪ್ರಗದೀಷ್‌ ಫೇಸ್‌'ಬುಕ್‌ ಮೂಲಕ ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ಎರಡು ವಾರಗಳ ಹಿಂದೆ ಅಪ್ರಾಪ್ತೆಯ ನಂಬರ್‌ ಪಡೆದ ಆರೋಪಿ, ಮನೆ ಬಳಿ ಹೋಗಿ ಮಾತನಾಡಬೇಕೆಂದು ಕರೆಸಿಕೊಂಡಿ​ದ್ದಾನೆ. ನಂತರ ರಾಮಮೂರ್ತಿನಗರದ ತನ್ನ ಅಪಾರ್ಟ್‌ಮೆಂಟ್‌'ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಇದನ್ನು ಮೊಬೈಲ್‌'ನಲ್ಲಿ ಚಿತ್ರೀಕರಿಸಿಕೊಂಡು ಆಗಾಗ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದ ಅಪ್ರಾಪ್ತೆಗೆ ಪ್ರಾಣ ಬೆದರಿಕೆ​ಯೊಡಿದ್ದಲ್ಲದೇ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌'ಮೇಲ್‌ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

(ಕನ್ನಡಪ್ರಭ ವಾರ್ತೆ)