ಮೂಲತಃ ಆಂಧ್ರದ ಅನಂತಪುರ ಜಿಲ್ಲೆ ಗೋರಂಟ್ಲ  ಮಂಡಲ್‌ನ ಮನೋ ಹರ್‌ ಕಳೆದ ವರ್ಷ ಬೆಂಗಳೂರಿಗೆ ಬಂದು ಬೊಮ್ಮನ ಹಳ್ಳಿಯಲ್ಲಿ ನೆಲೆಸಿದ್ದ. ಬೊಮ್ಮನಹಳ್ಳಿ ಯಲ್ಲಿರುವ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕಿದ್ದ. ತಾನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿ ತನ್ನ ಊರಿನವಳೇ ಆದ ಯುವತಿಯೊಬ್ಬಳನ್ನು ಮನೋ ಹರ್‌ ಪ್ರೀತಿಸುತ್ತಿದ್ದ.

ಬೆಂಗಳೂರು(ಏ.23) : ಪ್ರೇಯಸಿಯೊಂದಿಗೆ ಸುಖವಾಗಿ ಸಂಸಾರ ಬೈಕ್‌ ಕಳವು ಕೃತ್ಯಕ್ಕೆ ಇಳಿದಿದ್ದ ಅಂತಾರಾಜ್ಯ ಕಳ್ಳನನ್ನು ಬೊಮ್ಮ ನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊಂಗಸಂದ್ರದ ನಾಯ್ದು ಲೇಔಟ್‌ ನಿವಾಸಿ ಮನೋಹರ್‌ ಬಂಧಿತ. ಆರೋಪಿಯಿಂದ 25 ಲಕ್ಷ ಮೌಲ್ಯದ 51 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಆಂಧ್ರದ ಅನಂತಪುರ ಜಿಲ್ಲೆ ಗೋರಂಟ್ಲ ಮಂಡಲ್‌ನ ಮನೋ ಹರ್‌ ಕಳೆದ ವರ್ಷ ಬೆಂಗಳೂರಿಗೆ ಬಂದು ಬೊಮ್ಮನ ಹಳ್ಳಿಯಲ್ಲಿ ನೆಲೆಸಿದ್ದ. ಬೊಮ್ಮನಹಳ್ಳಿ ಯಲ್ಲಿರುವ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕಿದ್ದ. ತಾನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿ ತನ್ನ ಊರಿನವಳೇ ಆದ ಯುವತಿಯೊಬ್ಬಳನ್ನು ಮನೋ ಹರ್‌ ಪ್ರೀತಿಸುತ್ತಿದ್ದ.

 ಅನಾರೋಗ್ಯದಿಂದ ಯುವತಿ ಊರಿಗೆ ತೆರಳಿದ್ದಳು. ವಾಪಸ್‌ ಬೆಂಗಳೂರಿಗೆ ಬರುವಂತೆ ಆರೋಪಿ ಪ್ರೇಯಸಿಯನ್ನು ಒತ್ತಾಯಿಸಿದ್ದ.

ಬೆಂಗಳೂರಿಗೆ ಬರುತ್ತೇನೆ, ಆದರೆ ಕೆಲಸಕ್ಕೆ ಹೋಗುವುದಿಲ್ಲ ಎಂದು ಷರತ್ತು ವಿಧಿಸಿದ್ದಳು. ಪ್ರೇಯಸಿಯೊಂದಿಗೆ ಜೀ ವನ ನಡೆಸುವ ಉದ್ದೇಶದಿಂದ ಆರೋಪಿ ಕಳವು ಕೃತ್ಯಕ್ಕೆ ಇಳಿದಿದ್ದ. ಕಳವು ಕೃತ್ಯದ ಬಗ್ಗೆ ಪ್ರೇಯಸಿಗೆ ತಿಳಿದಿರಲಿಲ್ಲ. ಆರೋಪಿ ಕದ್ದ ಬೈಕ್‌ಗಳನ್ನು ಆಂಧ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈತನ ಬಂಧನದಿಂದ 36 ಪ್ರಕರಣಗಳು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾ ಳ್ಕರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಹೆಚ್ಚಾ ಗಿತ್ತು. ಆರೋಪಿ ಪತ್ತೆಯಾಗಿ ರಲಿಲ್ಲ. ಪೊಲೀಸರು ಯೋಜನೆ ರೂಪಿಸಿ, ಸೆæಕೆಂಡ್‌ ಹ್ಯಾಂಡ್‌ ಬೈಕ್‌ ಬೇಕು ಎಂದು ಬೊಮ್ಮನಹಳ್ಳಿಯ ಹಲವೆಡೆ ಕರಪತ್ರ ಅಂಟಿಸಿದ್ದರು. ಚೀಟಿ ನೋಡಿದ ಮನೋಹರ್‌ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದ. ಬೈಕ್‌ ಖರೀದಿ ನೆಪದಲ್ಲಿ ಮನೋಹರ್‌ನನ್ನು ಸಂಪರ್ಕಿಸಿದ ಪೊಲೀಸರು ಆತನ ಬಂಧಿಸಿದ್ದರು.

ಕನ್ನಡಪ್ರಭ ವಾರ್ತೆ