ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ತಕರಾರಿಲ್ಲ. ನನ್ನ ತಕರಾರು ಏನೇ ಇದ್ದರೂ ಅದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಗ್ಗೆ’ ಎಂದು ಹೇಳುವ ಮೂಲಕ ಮೋದಿ ಅವರ ಕಡುವೈರಿ, ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಚ್ಚರಿ ಮೂಡಿಸಿದ್ದಾರೆ.

ಕೋಲ್ಕತಾ(ಆ.20): ‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ತಕರಾರಿಲ್ಲ. ನನ್ನ ತಕರಾರು ಏನೇ ಇದ್ದರೂ ಅದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಗ್ಗೆ’ ಎಂದು ಹೇಳುವ ಮೂಲಕ ಮೋದಿ ಅವರ ಕಡುವೈರಿ, ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಚ್ಚರಿ ಮೂಡಿಸಿದ್ದಾರೆ.

ಸಿಎನ್‌ಎನ್ ನ್ಯೂಸ್-18 ಸಂಪಾದಕ ಭೂಪೇಂದ್ರ ಚೌಬೆ ಅವರ ಜತೆಗಿನ ಸಂವಾದದಲ್ಲಿ ಶನಿವಾರ ಮಾತನಾಡಿದ ಮಮತಾ, ‘ನಾನು ಮೋದಿ ಪರ ವಹಿಸುವೆ. ಆದರೆ ಅಮಿತ್ ಶಾ ಅವರ ಪರ ವಹಿಸಲ್ಲ. ನಾನು ಪ್ರಧಾನಿಯವರನ್ನು ದೂಷಿಸುವುದಿಲ್ಲ. ನಾನೇಕೆ ಅವರನ್ನು ದೂಷಿಸಬೇಕು?’ ಎಂದು ಪ್ರಶ್ನಿಸಿದರು. ‘ಆದರೆ ಅಮಿತ್ ಶಾ ಬಗ್ಗೆ ನನಗೆ ತಕರಾರಿದೆ. ಅವರ ಕಾರ್ಯವೈಖರಿಯಿಂದ ಎಲ್ಲರೂ ಭಯಗೊಂಡಿದ್ದಾರೆ. ಅವರದ್ದು ಸೂಪರ್ ಸರ್ವಾಧಿಕಾರತ್ವ. ಓರ್ವ ಪಕ್ಷಾಧ್ಯಕ್ಷನಾಗಿ ಅವರು ಕೇಂದ್ರ ಸಚಿವರ ಸಭೆ ಕರೆಯುತ್ತಾರೆ ಎಂದರೆ ಪ್ರಧಾನಮಂತ್ರಿಗಳು ಮೋದಿಯವರೋ ಅಥವಾ ಅಮಿತ್ ಶಾ ಅವರೋ...’ ಎಂದು ದೀದಿ ಪ್ರಶ್ನಿಸಿದರು.

ಶಾ ಸ್ವಾಗತ:

ಮೋದಿ ಅವರ ಸಾಮರ್ಥ್ಯವನ್ನು ಕೊನೆಗೂ ಮಮತಾ ಅರಿತಿದ್ದಾರೆ ಎಂದು ಅಮಿತ್ ಶಾ ಅವರು ದೀದಿ ಹೇಳಿಕೆಯನ್ನು ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ.