ನವದೆಹಲಿ(ನ.17): 500, 1000 ರೂಪಾಯಿ ನೋಟ್ ಬ್ಯಾನ್ ಮಾಡಿದ ಬಳಿಕ ಜನರು ನೋಟು ವಿನಿಮಯ ಹಾಗೂ ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಹಾಗೂ ATM ಹೊರಗೆ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಈಗ ಸರ್ವೇ ಸಾಮಾನ್ಯವಾಗಿವೆ. ಹೀಗೆ ಗಂಟೆಗಟ್ಟಲೇ ಕಾದರೂ ಹಣ ಸಿಗುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಹೀಗಿರುವಾಗ ಪಶ್ಚಿಮ ಬನಂಗಾಳ ಮುಖ್ಯಮಂತ್ರಿ ATM ಪದಕ್ಕೆ ಹೊಸತೊಂದು ವ್ಯಾಖ್ಯಾನ ನೀಡಿದ್ದಾರೆ. ಬ್ಯಾಂಕ್ ಹಾಗೂ ATM ಹೊರಗಡೆ ಗಂಟೆಗಟ್ಟಲೇ ಹಣಕ್ಕಾಗಿ ಕಾದು ಸುಸ್ತಾದವರು ಮಮತಾ ಬ್ಯಾನರ್ಜಿ ಕೊಟ್ಟ ಈ ಹೊಸ ವ್ಯಾಖ್ಯಾನವನ್ನು ಒಪ್ಪಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಿನ್ನೆ ಮಮತಾ ಬ್ಯಾನರ್ಜಿ ಸಂಸತ್ ಭವನದಿಂದ ಸುಮಾರು 1 ಕಿ. ಮೀ. ದೂರವಿರುವ ರಾಷ್ಟ್ರಪತಿ ಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ್ದರು. ಈ ವೇಳೆ ಕೇಂದ್ರ ಸರ್ಕಾರ ನೋಟು ನಿಷೇಧ ಹಿಂಪಡೆಯಲಿ ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದಾದ ಬಳಿಕ ತನ್ನ ಮಾತಿನ ಮಧ್ಯೆ ATM(Automated Teller Machine, Any Time Money) ಪದಕ್ಕೆ ಹೊಸತೊಂದು ವ್ಯಾಖ್ಯಾನವನ್ನೂ ನೀಡಿದ್ದಾರೆ.

ಜನರ ಪರದಾಟ ಕಂಡಿರುವ ಮಮತಾ ಬ್ಯಾನರ್ಜಿ 'ATM ಅಂದರೆ ಅಟೋಮೇಟೆಡ್ ಟೆಲ್ಲರ್ ಮಷೀನ್ ಅಲ್ಲ ಬದಲಾಗಿ 'ಆಯೇಗಾ ತಮ್ ಮಿಲೇಗಾ' ಎಂದಾಗಬೇಕು' ಎಂದು ತಿಳಿಸಿದ್ದಾರೆ.

ಸದ್ಯ ಇವರು ನೀಡಿರುವ ಈ ಹೊಸ ವ್ಯಾಖ್ಯಾನ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರೂ ಕೂಡಾ ಕೆಲವೊಂದು ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ.