Asianet Suvarna News Asianet Suvarna News

ಕೇಜ್ರಿ ಭೇಟಿಗೆ ನಿರಾಕರಣೆ: ಮಮತಾ ಗರಂ..!

ಕೇಜ್ರಿ ಭೇಟಿಗೆ ನಿರಾಕರಣೆ: ಮಮತಾ ಗರಂ

ನವದೆಹಲಿಯ ಲೆ.ಗ. ಕಚೇರಿಯಲ್ಲಿ ಕೇಜ್ರಿ ಧರಣಿ

ಮಮತಾ ಬೇಟಿಗೆ ಅವಕಾಶ ಕೊಡದ ಅನಿಲ್ ಬೈಜಲ್

Mamata Banerjee Denied Permission To Meet Arvind Kejriwal By Lt Governor

ನವದೆಹಲಿ(ಜೂ.16): ನವದೆಹಲಿಯಲ್ಲಿ ಐಎಎಸ್ ಅಧಿಕಾರಿಗಳ ಪ್ರತಿಭಟನೆಗೆ ಬ್ರೇಕ್ ಹಾಕುವಂತೆ ಕೋರಿ ಲೆ.ಗ. ಕಚೇರಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಚಿವರುಗಳಾದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಗೋಪಾಲ್ ರಾಯ್ ನಡೆಸುತ್ತಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ 6 ದಿನಗಳಿಂದ ಲೆ. ಗ. ಕಚೇರಿ ಸೋಫಾ ಮೇಲೆ ಕುಳಿತು ಧರಣಿ ನಡೆಸುತ್ತಿರುವ ಆಪ್ ನಾಯಕರು, ಹಲವು ಬೇಡಿಕೆಗಳನ್ನು ಮುಂದಿಟ್ಟು ಲೆ.ಗ ಅನಿಲ್ ಬೈಜಲ್ ಅವರ ಭೇಟಿಗೆ ಕಾಯುತ್ತಿದ್ದಾರೆ, ಈ ಮಧ್ಯೆ ಧರಣಿ ನಿರತ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಆಡಲು ಬಂದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ, ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿರುವ ಮಮತಾ, ಅರವಿಂದ್ ಕೇಜ್ರಿವಾಲ್ ಅವರನ್ನು ಲೆ.ಗ. ಕಚೇರಿಯಲ್ಲಿ ಭೇಟಿ ಮಾಡಲು ಪ್ರಯತ್ನಿಸಿದರು. ಆದರೆ ಲೆ.ಗ. ಅನಿಲ್ ಬೈಜಲ್ ಈ ಭೇಟಿಗೆ ಅವಕಾಶ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ, ಮುಖ್ಯಮಂತ್ರಿಯೊಬ್ಬರು ಈ ರೀತಿ ಧರಣಿ ಕುಳಿತಿರುವುದು ಆಡಳತದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಲೆ.ಗ ಶೀಘ್ರದಲ್ಲೇ ನಿರ್ಧಾರಕ್ಕೆ ಬರುವುದು ಒಳಿತು ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಭೇಟಿಗೆ ನಿರಾಕರಿಸಿದ ಅನಿಲ್ ಬೈಜಲ್ ಕ್ರಮವನ್ನು ಮಮತಾ ತೀವ್ರವಾಗಿ ಖಂಡಿಸಿದ್ದಾರೆ.

Follow Us:
Download App:
  • android
  • ios