ಪ್ರಾದೇಶಿಕ ಪಕ್ಷದ ನಾಯಕರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ; ಏನಿದೆ ದೀದಿ ಲೆಕ್ಕಾಚಾರ?

First Published 3, Apr 2018, 5:26 PM IST
Mamata Banarjee Met Regional Party Leaders
Highlights

ಪ್ರಧಾನಿ ರೇಸ್‌ನಿಂದ ಮುಲಾಯಂ, ಲಾಲು ಔಟಾದ ಮೇಲೆ  ಜಯಲಲಿತಾ ನಿಧನದ ನಂತರ ಪ್ರಾದೇಶಿಕ ಪಕ್ಷಗಳಲ್ಲಿ ನಾನೇ ಪಿಎಂ ಅಭ್ಯರ್ಥಿ ಎಂದು ಓಡಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ವಾರ ದೆಹಲಿಗೆ ಬಂದಾಗ  ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾದರು.

ನವದೆಹಲಿ (ಏ. 03): ಪ್ರಧಾನಿ ರೇಸ್‌ನಿಂದ ಮುಲಾಯಂ, ಲಾಲು ಔಟಾದ ಮೇಲೆ  ಜಯಲಲಿತಾ ನಿಧನದ ನಂತರ ಪ್ರಾದೇಶಿಕ ಪಕ್ಷಗಳಲ್ಲಿ ನಾನೇ ಪಿಎಂ ಅಭ್ಯರ್ಥಿ ಎಂದು ಓಡಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ವಾರ ದೆಹಲಿಗೆ ಬಂದಾಗ  ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾದರು.

ಆದರೆ ಸೋನಿಯಾರನ್ನು ಭೇಟಿಯಾಗಲು ಮಾತ್ರ ಸಮಯ ತೆಗೆದುಕೊಂಡಿರಲಿಲ್ಲ. ಕೊನೆಗೆ ಶರದ್ ಪವಾರ್ ಮಮತಾಗೆ, ‘ಮೇಡಂ ಅವರನ್ನು ನೋಡಿ ಬನ್ನಿ’ ಎಂದು ಬಹಳವೇ ಒತ್ತಾಯಿಸಿದ  ಮೇಲೆ ಸೋನಿಯಾ ಮನೆಗೆ ಹೋಗಿದ್ದರಂತೆ ಮಮತಾ. ಅಲ್ಲಿ ಕೂಡ  ಹೆಚ್ಚಾಗಿ ಸೋನಿಯಾ ಆರೋಗ್ಯದ ಬಗ್ಗೆಯೇ ಮಾತನಾಡಿದ  ಮಮತಾ, 2019 ರ  ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳುವುದರ  ಬಗ್ಗೆ ಚಕಾರ ಎತ್ತಲಿಲ್ಲವಂತೆ. ಸೋನಿಯಾ ತನಗಿಂತ ಸೀತಾರಾಮ್ ಯೆಚೂರಿ ಜೊತೆಗೆ ಬಹಳ ಚರ್ಚೆ ಮಾಡುತ್ತಾರೆ ಮತ್ತು ರಾಹುಲ್  ನನಗಿಂತ ಬಹಳವೇ ಜೂನಿಯರ್ ಎಂದು ಮಮತಾ ಅನೇಕ  ಪ್ರಾದೇಶಿಕ ನಾಯಕರ ಬಳಿ ಹೇಳಿಕೊಂಡಿದ್ದಾರಂತೆ.

 

ಹೆಚ್ಚಿನ ಸುದ್ದಿಗಳಿಗೆ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

loader