ಕೋಲಾರ(ಜು. 15]  ಕೋಲಾರದಲ್ಲಿ ಶಾಸಕ ಕೆ.ವೈ.ನಂಜೇಗೌಡ ರೇವಣ್ಣ ಮೇಲೆ ವಾಗ್ದಾಳಿ ಮಾಡಿ, ರೇವಣ್ಣ ಏನು ದೊಡ್ಡ ಮನುಷ್ಯರ ? ರೇವಣ್ಣನವರೆ ಫೈನಲ್ಲಾ ? ಸಮಸ್ಯೆ ಹೇಳಿಕೊಳ್ಳೋಕೆ ಸಿಎಂ ಕುಮಾರಸ್ವಾಮಿ, ಸಿದ್ದರಾಮಣ್ಣ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಕೋಲಾರ ಡೈರಿ ವಿಚಾರದಲ್ಲಿ ರೇವಣ್ಣ ನನಗೂ ತೊಂದರೆ ಕೊಟ್ಟಿದ್ದಾರೆ. ರೇವಣ್ಣ ಸರಿ ಇಲ್ಲ. ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೋಪ ಇರುತ್ತೆ. ಹಾಗಂತ ರಾಜೀನಾಮೆ ಕೊಡಬಾರದು ಎಂದು ಹೇಳಿದರು.

ಅತೃಪ್ತ ಶಾಸಕರಿಗೆ ಹೇಳಿಕೊಳ್ಳೋಕೆ ಏನೋ ಒಂದು ಕಾರಣಬೇಕು. ಸಮಸ್ಯೆ ಆದ ತಕ್ಷಣ ರಾಜೀನಾಮೆ ಕೊಟ್ಟು ಬಿಡುವುದೆ ಎಂದು ರಾಜೀನಾಮೆ ಕೊಟ್ಟವರ ವಿರುದ್ಧವೂ ಮಾಲೂರು ಕಾಂಗ್ರೆಸ್ ಶಾಸಕ ವಾಗ್ದಾಳಿ ಮಾಡಿದರು.