500 ಮೀ. ದೂರ ಸಮುದ್ರ ಮಧ್ಯೆ ನಡೆಯುವ ಸೌಲಭ್ಯ₹53.5 ಲಕ್ಷ ವೆಚ್ಚದ ಈ ಕಾಮಗಾರಿ

ಮಲ್ಪೆ, ಉಡುಪಿ: ಕೇರಳ ರೀತಿಯಲ್ಲೇ ಉಡುಪಿಯ ಪಡುಕೆರೆಯಲ್ಲಿ ರಾಜ್ಯದ ಮೊದಲ ‘ಸೀ ವಾಕ್ ವೇ’ ನಿರ್ಮಾಣ ಕಾಮಗಾರಿಗೆ ಬುಧವಾರ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ₹53.5 ಲಕ್ಷ ವೆಚ್ಚದ ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಸಚಿವ ಸೂಚನೆ ನೀಡಿದ್ದಾರೆ.

ಕೇರಳದಲ್ಲಿ ಇಂತಹ ಸೀವಾಕ್ ವೇ ಇದ್ದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಹಿಂದಿನ ಜಿಲ್ಲಾಧಿಕಾರಿ ರೇಜು ಅವರು ಉಡುಪಿಗೆ ಬಂದಿದ್ದಾಗ ಕೇರಳದ ರೀತಿಯಲ್ಲಿ ಇಲ್ಲೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಸೀ ವಾಕ್ ವೇ ನಿರ್ಮಿಸಲು ಮಾಡಿದ್ದ ಸಲಹೆಯಂತೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಅದರಂತೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜ.1ಕ್ಕೆ ಸೀ ವಾಕ್ ವೇ ಅನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಮಲ್ಪೆಯನ್ನು ಸೇರುವ ಉದ್ಯಾವರ ಸೇತುವೆ ಅಳಿವೆ ಬಾಗಿಲಲ್ಲಿ 500 ಮೀಟರ್ ಉದ್ದದ ಕಲ್ಲಿನ ಬ್ರೇಕ್ ವಾಟರ್ ಇದೆ. ಅಲ್ಲಿ ಸೀ ವಾಕ್ ನಿರ್ಮಿಸಲಾಗುತ್ತದೆ.