ಕರ್ನಾಟದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿದ ವಿಷಯ ಕೇಳಿ ಮದ್ಯದ ದೊರೆ ವಿಜಯ್‌ ಮಲ್ಯ ಫುಲ್‌ ಖುಷ್‌ ಆಗಿದ್ದಾರೆ.

ಕರ್ನಾಟದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿದ ವಿಷಯ ಕೇಳಿ ಮದ್ಯದ ದೊರೆ ವಿಜಯ್‌ ಮಲ್ಯ ಫುಲ್‌ ಖುಷ್‌ ಆಗಿದ್ದಾರೆ. ಸದ್ಯ ಲಂಡನ್‌ನಲ್ಲಿರುವ ಮಲ್ಯ ಈ ಹಿಂದೆ ತಾವು ಕರ್ನಾಟಕದಲ್ಲಿ ಇದ್ದಾಗ ಮಾಡಿಸಿಕೊಂಡಿದ್ದ ರೇಷನ್‌ ಕಾರ್ಡ್‌ ಮತ್ತು ಜಮೀನ್‌ ಉತಾರವನ್ನು ಸೂಟ್‌ಕೇಸ್‌ನಿಂದ ಹೊರತೆಗೆದು ಸಿದ್ಧವಾಗಿರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಮಗನ ಕೈಲಿ ಅದನ್ನು ಕೊಟ್ಟು ಬೆಂಗಳೂರಿಗೆ ಕಳುಹಿಸಲಿದ್ದು, ತಾವು ಮಾಡಿರುವ ಎಲ್ಲಾ ಸಾಲವೂ ಬೆಳೆಸಾಲ ಎಂದು ಸರ್ಕಾರಕ್ಕೆ ದಾಖಲೆ ನೀಡುವ ಸಾಧ್ಯತೆಯಿದೆ. ಅಲ್ಲದೆ, ತಮ್ಮದು ವಿಶೇಷ ಪ್ರಕರಣವೆಂದು ಪರಿಗಣಿಸಿ, ರೈತರಿಗೆ ವಿಧಿಸಿರುವ 50 ಸಾವಿರ ರು. ಮಿತಿಯನ್ನು ತಮಗೆ ಸಡಿಲಿಸಿ, ಎಲ್ಲಾ ಸಾಲ ಮನ್ನಾ ಮಾಡುವಂತೆಯೂ ಅವರು ಕೋರಲಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.