, ನಾವು ದೇಶ ಮಾರಿದ್ದರೆ ಮೋದಿಯವರು ಇಂದು ನಮ್ಮ ಯೋಜನೆಗಳನ್ನೇ ಹೊಸ ಹೆಸರಲ್ಲಿ ಜಾರಿ ಮಾಡುತ್ತಾ ಪ್ರಚಾರ ಗಿಟ್ಟಿಸುವುದು ಸಾಧ್ಯವಿತ್ತೆ
ಕಲಬುರಗಿ(ನ.30): ‘ಒಂದು ವೇಳೆ ಕಾಂಗ್ರೆಸ್ ಈ ದೇಶವನ್ನು ಮಾರಿದ್ದರೆ ಮೋದಿ ಪ್ರಧಾನಿ ಆಗುತ್ತಿದ್ದರಾ?’ - ‘ನಾನು ಚಹಾ ಮಾರಿದ್ದೇನೆ, ಆದರೆ ದೇಶವನ್ನು ಮಾರಿಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಹೀಗೆ.
ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ದೇಶ ಮಾರಿದ್ದರೆ ಮೋದಿಯವರು ಇಂದು ನಮ್ಮ ಯೋಜನೆಗಳನ್ನೇ ಹೊಸ ಹೆಸರಲ್ಲಿ ಜಾರಿ ಮಾಡುತ್ತಾ ಪ್ರಚಾರ ಗಿಟ್ಟಿಸುವುದು ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.
