ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮದ ನಡುವೆ ಮತ್ತೊಂದು ವಿವಾದ ತಲೆದೋರಿದೆ. ಹಂಪಿ ವಿವಿಯ ಕುಲಪತಿ  ಮಲ್ಲಿಕಾಘಂಟಿ,ವಿಧಾನಸೌಧಕ್ಕೆ ಸೂಟ್'​​​​ಕೇಸ್ ತೆಗೆದುಕೊಂಡು ಹೋದರೆ ಮಾತ್ರ ಕೆಲಸವಾಗುತ್ತೆ ಅಂತ ವಿವಾದಾತ್ಮಕ ಹೇಳಿಕೆಯೊಂದನ್ನ  ನೀಡಿದ್ದಾರೆ. ಹಂಪಿ ಕನ್ನಡ ವಿವಿಯ ಸಿಬ್ಬಂದಿ ಕೊರತೆ ನೀಗಿಸುವುದಾಗಿ ಸಿಎಂ ಭರವಸೆ  ನೀಡಿದ್ದ  ಮರುದಿನವೇ ಈ ರೀತಿ ಹೇಳಿಕೆ ನೀಡಿದ್ದಾರೆ.

ಬಳ್ಳಾರಿ(ಸೆ.14): ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮದ ನಡುವೆ ಮತ್ತೊಂದು ವಿವಾದ ತಲೆದೋರಿದೆ. ಹಂಪಿ ವಿವಿಯ ಕುಲಪತಿ ಮಲ್ಲಿಕಾಘಂಟಿ,ವಿಧಾನಸೌಧಕ್ಕೆ ಸೂಟ್'​​​​ಕೇಸ್ ತೆಗೆದುಕೊಂಡು ಹೋದರೆ ಮಾತ್ರ ಕೆಲಸವಾಗುತ್ತೆ ಅಂತ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ. ಹಂಪಿ ಕನ್ನಡ ವಿವಿಯ ಸಿಬ್ಬಂದಿ ಕೊರತೆ ನೀಗಿಸುವುದಾಗಿ ಸಿಎಂ ಭರವಸೆ ನೀಡಿದ್ದ ಮರುದಿನವೇ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಸಿಎಂ ನೀಡುವ ಭರವಸೆ ಒಂದೇ ದಿನಕ್ಕೆ ಮಾತ್ರ ಸೀಮಿತ’. ಸೂಟ್​​​ಕೇಸ್​​​ ಇಲ್ಲ ಅಂದ್ರೆ ವಿಶ್ವ ವಿದ್ಯಾಲಯಗಳ ಅಭಿವೃದ್ಧಿ ಆಗಲ್ಲ ಅಂತ ಸಿಎಂ ಭರವಸೆಗೆ ಮಲ್ಲಿಕಾಘಂಟಿ ಟಾಂಗ್​ ಕೊಟ್ಟಿದ್ದಾರೆ. ಈ ಮೂಲಕ ‌ವಿಧಾನಸೌಧಕ್ಕೆ ಸೂಟ್​​ಕೇಸ್​​​​ ತುಂಬಾ ಹಣ ಕೊಟ್ರೆ ಕೆಲಸ ಆಗುತ್ತಾ? ವಿವಿ ಕುಲಪತಿ ಮಲ್ಲಿಕಾ ಘಂಟಿ ಸೂಟ್​​​ಕೇಸ್​ ಮಾತಿನ ಮರ್ಮವೇನು? ಎಂಬ ಹೊಸದೊಂದು ಚರ್ಚೆ ಹುಟ್ಟುಹಾಕಿದಂತಾಗಿದೆ.