Asianet Suvarna News Asianet Suvarna News

ಕೊಲೆಯಾದ ಪತಿಯನ್ನೇ ರೌಡಿಶೀಟರ್ ಎಂದ ಮಲ್ಲಮ್ಮ

ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ತನಿಖೆ ವಹಿಸುವಂತೆ ಯೋಗೀಶ್ ಗೌಡ ಗೌಡರ ಕುಟುಂಬದವರು ಅರ್ಜಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ಸೇರಿದ ಮಲ್ಲಮ್ಮ ಇದೀಗ ಪತಿ ಯೋಗೀಶಗೌಡ ಹಾಗೂ ಮಾವ ಗುರುನಾಥ ಗೌಡರು ರೌಡಿ ಶೀಟರ್ ಇದ್ದು ಅವರು ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅನರ್ಹರು ಎಂದಿದ್ದಾರೆ.

Mallamma Says her Husband is Rowdisheeter

ಬೆಂಗಳೂರು (ಜ.23): ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ತನಿಖೆ ವಹಿಸುವಂತೆ ಯೋಗೀಶ್ ಗೌಡ ಗೌಡರ ಕುಟುಂಬದವರು ಅರ್ಜಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ಸೇರಿದ ಮಲ್ಲಮ್ಮ ಇದೀಗ ಪತಿ ಯೋಗೀಶಗೌಡ ಹಾಗೂ ಮಾವ ಗುರುನಾಥ ಗೌಡರು ರೌಡಿ ಶೀಟರ್ ಇದ್ದು ಅವರು ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅನರ್ಹರು ಎಂದಿದ್ದಾರೆ.

ಮಲ್ಲಮ್ಮ ಸಲ್ಲಿಸಿರುವ ರಿಟ್ ಅರ್ಜಿ ಇಂದು ಮದ್ಯಾಹ್ನದ ನಂತರ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಈ ಹತ್ಯೆಯಲ್ಲಿ ಪ್ರಭಾವಿಗಳ ಕೈವಾಡ ಇದೆ ಎಂದು ಆರೋಪಿಸಿ ದೂರು ನೀಡಿದ್ದ ಮಲಮ್ಮ ಇದೀಗ ಉಲ್ಟಾ ಹೊಡೆದಿದ್ದು, ದೂರು ಇಂಗ್ಲೀಷನಲ್ಲಿ ಬರೆಸಲಾಗಿತ್ತು. ಅದರಲ್ಲೇನಿದೆ ಎಂದು ತಮಗೆ ತಿಳಿಯದೆ ಸಹಿ ಮಾಡಿಸಲಾಗಿತ್ತು ಎಂದು ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ಸಚಿವರ ಕೈವಾಡದ ಬಗ್ಗೆ ನಾನೆಂದು ಹೇಳಿಲ್ಲ.‌ಹತ್ಯೆಯಾದವರ ಹೆಂಡತಿಯಾದ ನನ್ನ ಹೇಳಿಕೆಯನ್ನು ಪರಿಗಣಿಸಬೇಕು. ಒಂದು ವೇಳೆ ನನ್ನ ಈಗ ತಮ್ಮನ್ನು (ತಮ್ಮ ಹೇಳಿಕೆಯನ್ನು) ಪರಿಗಣಿಸದೇ ತೀರ್ಪು ನೀಡಿದರೆ ಅದು ಪೂರ್ವ ನಿರ್ಧರಿತ ತೀರ್ಪು ಆಗಲಿದೆ ಎಂದಿದ್ದಾರೆ. ‌

ಕುಟುಂಬಸ್ಥರಿಂದ ಯೋಗೀಶ್ ತಾಯಿ, ಸಹೋದರ ತಾಯಿ ತುಂಗಮ್ಮ, ಸಹೋದರ ಗುರುನಾಥಗೌಡ ಸಲ್ಲಿಸಿರೋ ಅರ್ಜಿಸಲ್ಲಿಸಿದ್ದು ಇಂದು ಧಾರವಾಡ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

Follow Us:
Download App:
  • android
  • ios