ಮೆರಿಕಾ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಮಾಲಿಯಾ ಒಬಾಮ ಹಾಲಿವುಡ್ ಖ್ಯಾತ ನಿರ್ಮಾಪಕ ಹಾರ್ವೆ ವಿನ್ಸ್ ಸ್ಟನ್ ಜೊತೆ ಇಂಟರ್ನ್ ಶಿಪ್ ಮಾಡಲಿದ್ದಾರೆ ಎಂದು ಅಮೆರಿಕಾ ಮ್ಯಾಗಜಿನ್'ವೊಂದು ವರದಿ ಮಾಡಿದೆ.

ವಾಷಿಂಗ್ಟನ್ (ಜ.20): ಅಮೆರಿಕಾ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಮಾಲಿಯಾ ಒಬಾಮ ಹಾಲಿವುಡ್ ಖ್ಯಾತ ನಿರ್ಮಾಪಕ ಹಾರ್ವೆ ವಿನ್ಸ್ ಸ್ಟನ್ ಜೊತೆ ಇಂಟರ್ನ್ ಶಿಪ್ ಮಾಡಲಿದ್ದಾರೆ ಎಂದು ಅಮೆರಿಕಾ ಮ್ಯಾಗಜಿನ್'ವೊಂದು ವರದಿ ಮಾಡಿದೆ.

Add Asianetnews Kannada as a Preferred SourcegooglePreferred

18 ವರ್ಷದ ಮಾಲಿಯಾ ಒಬಾಮಾ ನ್ಯೂಯಾರ್ಕ್ ನಲ್ಲಿರುವ ವಿನ್'ಸ್ಟಿನ್ ಆಫೀಸಿನಲ್ಲಿ ಮುಂದಿನ ತಿಂಗಳಿನಿಂದ ಇಂಟರ್ನಿಯಾಗಿ ಕೆಲಸ ಪ್ರಾರಂಭಿಸಲಿದ್ದಾರೆ. ಒಬಾಮಾ ಕುಟುಂಬವು ಶ್ವೇತಭವನದಿಂದ ನಿರ್ಗಮಿಸದ ಬಳಿಕ ಮಾಲಿಯಾ ಕೆಲಸ ಪ್ರಾರಂಭಿಸಲಿದ್ದಾರೆ.

ಯಾವ ಡಿಪಾರ್ಟ್ ಮೆಂಟಿನಲ್ಲಿ ಮಾಲಿಯಾ ಕೆಲಸ ಮಾಡಲಿದ್ದಾರೆ ಎಂಬುದು ಖಚಿತವಾಗಿಲ್ಲ. ಮಾರ್ಕೆಂಟಿಂಗ್ ಅಥವಾ ಡೆವಲಪ್ ಮೆಂಟಿನಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ವಿನ್ ಸ್ಟಿನ್ ಒಬಾಮಗೋಸ್ಕರ ಸಾಕಷ್ಟು ಬಾರಿ ಬಂಡವಾಳ ಸಂಗ್ರಹಿಸಿದ್ದರು. ಇತ್ತೀಚಿಗೆ ಹಿಲರಿ ಕ್ಲಿಂಟನ್ ಪರವಾಗಿ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನೂ ಕೂಡಾ ಮಾಡಿದ್ದರು.