ಮಾಲೇಗಾಂವ್‌ ಸ್ಫೋಟ ಬಗ್ಗೆ ಏನೂ ಗೊತ್ತಿಲ್ಲ: ಕೋರ್ಟ್‌ಗೆ ಸಂಸದೆ ಪ್ರಜ್ಞಾ ಮಾಹಿತಿ| ಕುರ್ಚಿಯಲ್ಲಿ ಧೂಳೆಂದು ಕೋರ್ಟ್‌ನಲ್ಲಿ 2 ಗಂಟೆ ನಿಂತುಕೊಂಡಿದ್ದ ಸಂಸದೆ| 

ಮುಂಬೈ[ಜೂ.08]: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್‌ ಠಾಕೂರ್‌ ಶುಕ್ರವಾರ ಮುಂಬೈನ ಎನ್‌ಐಎನ ವಿಶೇಷ ಕೋರ್ಟ್‌ಗೆ ಹಾಜರಾದರು. ಒಂದೇ ವಾರದಲ್ಲಿ ಎರಡು ಗೈರಾಗಿದ್ದ ಸಾಧ್ವಿ, ವಿಶೇಷ ನ್ಯಾಯಾಲಯದ ಕಡ್ಡಾಯ ಹಾಜರಾತಿಯ ನಿರ್ದೇಶನದ ಮೇರೆಗೆ ಶುಕ್ರವಾರ ಹಾಜರಾದರು.

11 ವರ್ಷಗಳಷ್ಟು ಹಳೆಯ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿ.ಎಸ್‌. ಪಡಲ್ಕರ್‌, ಸ್ಪೋಟದ ಬಗ್ಗೆ ಮಾಹಿತಿ ಕೇಳಿದಾಗ ‘ಮಾಲೇಗಾಂವ್‌ ಸ್ಪೋಟದ ಬಗ್ಗೆ ತನಗೆ ಏನೂ ಗೊತ್ತಿಲ್ಲ’ ಎಂದು ಪ್ರಜ್ಞಾ ಹಾಗೂ ಅವರ ಸಹಚರರೂ ಸ್ಪಷ್ಟಪಡಿಸಿದರು.

ಇದೇ ವೇಳೆ ಕೋರ್ಟ್‌ನಲ್ಲಿ ಕೊಟ್ಟಕುರ್ಚಿಯ ಮೇಲೆ ದೂಳು ಇದೆ ಎಂದು ದೂರಿದ ಪ್ರಜ್ಞಾ, ಎರಡೂವರೆ ಗಂಟೆ ನಿಂತುಕೊಂಡೇ ವಿಚಾರಣೆ ಎದುರಿಸಿದರು.