ಮಾಲೆ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಲ್ಡೀವ್ಸ್ ಸರ್ಕಾರ, ವಿದೇಶಿ ಗಣ್ಯರಿಗೆ ನೀಡುವ ತನ್ನ ಅತ್ಯುನ್ನತ ಪ್ರಶಸ್ತಿಯಾದ ‘ಆರ್ಡರ್‌ ಆಫ್‌ ದಿ ರೂಲ್‌ ಇಝುದ್ದೀನ್‌’ ನೀಡಿ ಗೌರವಿಸಿದೆ. 

ಉಭಯ ರಾಷ್ಟ್ರಗಳ ಉತ್ತಮ ಬಾಂಧವ್ಯಕ್ಕೆ ಕಾರಣೀಭೂತರಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ.

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮ್ಮದ್‌ ಸೋಲಿಹ್‌ ಅವರು, 2 ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ಶನಿವಾರ ಗೌರವ ಪ್ರದಾನ ಮಾಡಿದರು.