Asianet Suvarna News Asianet Suvarna News

ಭಾರೀ ಭ್ರಷ್ಟಾಚಾರ : ಮಾಜಿ ಪ್ರಧಾನಿಯ 1774 ಕೋಟಿ ರು. ಆಸ್ತಿ ಜಪ್ತಿ

ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಮಾಜಿ ಪ್ರಧಾನಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 1774 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, ನಗದು ಹಾಗೂ ದುಬಾರಿ ಬೆಲೆಯ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌  ವಿರುದ್ಧ ಇದೀಗ ತನಿಖೆಯನ್ನು ಕೈಗೊಳ್ಳಲಾಗಿದೆ. 

Malaysian ex-PM's seized assets worth $270 million

ಕೌಲಾಲಂಪುರ: ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅವರಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 1774 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, ನಗದು ಹಾಗೂ ದುಬಾರಿ ಬೆಲೆಯ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಜೀಬ್‌ ರಜಾಕ್‌ ಅವರು ಪ್ರಧಾನಿಯಾಗಿದ್ದಾಗ ಸ್ಥಾಪಿಸಿದ 1 ಮಲೇಷ್ಯಾ ಡೆವಲಪ್ಮೆಂಟ್‌ ಬರ್ಹಡ್‌ (1 ಎಂಡಿಬಿ)ನಲ್ಲಿ ನಡೆದ ಕೋಟ್ಯಂತರ ಡಾಲರ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ. ತಪಾಸಣೆಯ ವೇಳೆ 12,000 ಆಭರಣ ತುಣುಕುಗಳು, 26 ವಿವಿಧ ಕರೆನ್ಸಿಗಳು ಸೇರಿದಂತೆ 195 ಕೋಟಿ ರು. ನಗದು ತುಂಬಿದ್ದ ಬ್ಯಾಗ್‌ಗಳು, 125 ಕೋಟಿ ರು. ಮೌಲ್ಯದ 400ಕ್ಕೂ ಅಧಿಕ ವಾಚುಗಳು ಪತ್ತೆಯಾಗಿವೆ.

ನಜೀಬ್‌ ರಜಾಕ್‌ಗೆ ಸೇರಿದ ಆರು ಆಸ್ತಿಗಳ ಮೇಲೆ ದಾಳಿ ನಡೆಸಿ ಸುಮಾರು 1774 ಕೋಟಿ ರು. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೊಂದು ಪ್ರಮಾಣದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದು ಮಲೇಷ್ಯಾ ಇತಿಹಾಸದಲ್ಲೇ ಮೊದಲು ಎಂದು ಅಪರಾಧ ತನಿಖಾ ವಿಭಾಗದ ಮುಖ್ಯಸ್ಥ ಅಮರ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಬೀಬ್‌ ರಜಾಕ್‌ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೊಸ ಸರ್ಕಾರ ಮಾಜಿ ಪ್ರಧಾನಿಯ ವಿರುದ್ಧ ಭ್ರಷ್ಟಾಚಾರ ತನಿಖೆಗೆ ಆದೇಶಿಸಿತ್ತು.

Follow Us:
Download App:
  • android
  • ios