Asianet Suvarna News Asianet Suvarna News

ಸುಳ್ಳು ಸುದ್ದಿ ಪ್ರಕಟಿಸಿದರೆ 10 ವರ್ಷ ಜೈಲು !

ಆದರೆ ಮಾನವ ಹಕ್ಕು ಗುಂಪುಗಳು, ನಿರಂಕುಶಾಧಿಕಾರಿಗಳು ಧ್ವನಿಗಳನ್ನು ವಿರೋಧಿಸುವವರನ್ನು ಮೌನವಾಗಿರಲು ಇಂತಹ ಕಾನೂನುಗಳನ್ನು ಬಳಸುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿವೆ.

Malaysia proposes 10 years jail for fake news

ಕೌಲಲಂಪುರ(ಮಾ.26): ಮಲೇಷಿಯಾ ಸರ್ಕಾರವು ಸುಳ್ಳುಸುದ್ದಿ ಪ್ರಕಟಿಸಿದ ಮಾಧ್ಯಮ ಹಾಗೂ ಪತ್ರಕರ್ತರ ವಿರುದ್ಧ ಗರಿಷ್ಠ 10 ವರ್ಷ ಜೈಲು ಶಿಕ್ಷಿ ವಿಧಿಸುವ ಕಾನೂನನ್ನು ಪ್ರಸ್ತಾಪಿಸಿದೆ.

ಈ ಶಿಕ್ಷೆಯು ವಿಧೇಶದಲ್ಲಿ ಪ್ರಕಟವಾದ ಲೇಖನಗಳು, ಚುನಾವಣೆಯ ಸಂದರ್ಭದಲ್ಲಿ ಭಯ ಹುಟ್ಟಿಸುವುದನ್ನು ಒಳಗೊಂಡಿದೆ. ಇತ್ತೀಚಿಗೆ ಅಮೆರಿಕಾ ಸೇರಿದಂತೆ ಹಲವು ಸರ್ಕಾರಗಳು ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿವೆ. ಆದರೆ ಮಾನವ ಹಕ್ಕು ಗುಂಪುಗಳು, ನಿರಂಕುಶಾಧಿಕಾರಿಗಳು ಧ್ವನಿಗಳನ್ನು ವಿರೋಧಿಸುವವರನ್ನು ಮೌನವಾಗಿರಿಸಲು ಇಂತಹ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಮಲೇಶಿಯಾ ಪ್ರಧಾನಿ ನಜೀಬ್ ರಜಾಕ್ ವಿರುದ್ಧ ಅನೇಕ ಭ್ರಷ್ಟಚಾರ ಆರೋಪಗಳಿದ್ದು ಮಾಧ್ಯಮಗಳು ಪ್ರಧಾನಿಯ ವಿರುದ್ಧ ಆಗಾಗ ಲೇಖನಗಳನ್ನು ಪ್ರಕಟಿಸುತ್ತಿವೆ. ಉದ್ದೇಶಿತ ಕಾನೂನು ಮುಂದಿನ ಆಗಸ್ಟ್'ನಲ್ಲಿ ಆರಂಭವಾಗುವ ಚುನಾವಣೆಗೆ ಮುಂಚೆಯೇ ಜಾರಿಗೊಳಿಸುವ ಸಾಧ್ಯತೆಯಿದೆ. ಸರ್ಕಾರದ ಕಾನೂನನ್ನು ವಿರೋಧ ಪಕ್ಷಗಳು, ಮಾನವ ಹಕ್ಕುಗಳ ಆಯೋಗ, ಸಾಮಾಜಿಕ ಹೋರಾಟಗಾರರು ಖಂಡಿಸಿದ್ದಾರೆ.

Follow Us:
Download App:
  • android
  • ios